ಆಲಮಟ್ಟಿ : ಮೇ.28: ನೂತನ ಸಕಾ9ರ ರಾಜ್ಯ ಸಕಾ9ರಿ ನೌಕರರಿಗೆ ಮೊದಲ ಸಿಹಿ ಸುದ್ದಿ ನೀಡಿದೆ. ನಿರೀಕ್ಷಿತ ತುಟ್ಟಿಭತ್ಯೆ ಹೆಚ್ಚಳಕ್ಕೆ ಸಕಾ9ರ ಅಸ್ತು ಎಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೇ.4 ರಷ್ಟು ತುಟ್ಟಿಭತ್ಯೆ ಹೆಚ್ಚಳ ಕಡತಕ್ಕೆ ಸಮ್ಮತಿ ಸೂಚಿಸಿ ಅನುಮೋದಿಸಿದ್ದಾರೆ.ಆ ಕಡತ ಆಥಿ9ಕ ಇಲಾಖೆಗೆ ಈಗ ರವಾನಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸಮಸ್ತ ನೌಕರರ ಹಾಗೂ ಕನಾ9ಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರವಾಗಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ತುಂಬ ಹೃದಯದಿಂದ ಅಭಿನಂದಿಸಲಾಗಿದೆ.
ಶನಿವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ.
ಶೇ.4 ರಷ್ಟು ತುಟ್ಟಿಭತ್ಯೆಯ ಕಡತ ಸಲ್ಲಿಕೆಯಾದ ಕೇವಲ 24 ಗಂಟೆಯೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಮೋದಿಸಿ ಆಥಿ9ಕ ಇಲಾಖೆಗೆ ಕಳುಹಿಸಿರುವ ಪ್ರಯುಕ್ತ ನೌಕರರ ವಲಯದಲ್ಲಿ ಹರ್ಷ ಮೂಡಿದೆ. ನೌಕರರು ಕಳೆದ ಒಂದುವರೆ ತಿಂಗಳಿನಿಂದ ತುಟ್ಟಿಭತ್ಯೆ ನಿರೀಕ್ಷೆಯಲ್ಲಿದ್ದರು. ತುಟ್ಟಿಭತ್ಯೆ ಹೆಚ್ಚಳಕ್ಕೆ ಸಕಾ9ರ ಮುಂದಾಗಿರುವ ಕ್ರಮ ಸಂತಸ ತಂದಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಹೇಳಿದ್ದಾರೆ.
ಇದೇ ಸೋಮವಾರ ಆಥಿ9ಕ ಇಲಾಖೆಯಿಂದ ಶೇ.4 ತುಟ್ಟಿಭತ್ಯೆ ಅಧಿಕೃತ ಆದೇಶ ಹೊರಡಿಸಲು ಮುಖ್ಯಮಂತ್ರಿಯವರಲ್ಲಿ ಸಂಘ ಮನವಿ ಮಾಡಿಕೊಂಡದ್ದು ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ವೇಳೆ ರಾಜ್ಯದ ಶಿಕ್ಷಕರ ಜ್ವಲಂತ ಸಮಸ್ಯೆಗಳಾದ ವಗಾ9ವಣೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳವರ ಗಮನ ಸೆಳೆದು ಈ ಕುರಿತು ಚಚಿ9ಸಲು ಸಭೆ ಕರೆಯಬೇಕೆಂದು ಮನವಿ ಮಾಡಲಾಗಿದೆ. ದೊರೆತ ಅಲ್ಪ ಅವಕಾಶದಲ್ಲಿಯೇ ಶಿಕ್ಷಕರ ಹಾಗೂ ನೌಕರರ ಸಮಸ್ಯೆಗಳ ಬಗ್ಗೆ ಚಚಿ9ಸಲಾಯಿತು ಎಂದು ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.