ಶೇ. 4 ರಷ್ಟು ಆಸ್ತಿ ತೆರಿಗೆ ಹೆಚ್ಚಿಸಿ ಪರಿಷ್ಕರಣೆ

ಕಲಬುರಗಿ,ಮಾ.31:2022-23 ನೇ ಸಾಲಿನ ಮಾರ್ಚ್ ಮಾಹೆಯ ಮೊದಲ ವಾರದಲ್ಲಿ ಮಾರುಕಟ್ಟೆ ಮೌಲ್ಯಗಳು ಪರಿಷ್ಕರಣೆಯಾಗದ ಹಿನ್ನೆಲೆಯಲ್ಲಿ, ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಬಗೆಯ ವಿವಿಧ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿರುವ ವಸತಿ, ವಾಣಿಜ್ಯ, ಅಪಾರ್ಟ್‍ಮೆಂಟ್, ಖುಲ್ಲಾ ಭೂಮಿ ಹಾಗೂ ಇತರೆ ಸ್ವತ್ತುಗಳ 2022-23 ನೇ ಸಾಲಿನ ಆಸ್ತಿ ತೆರಿಗೆಯ ಮೇಲೆ ಶೇ 4 ರಷ್ಟು ಹೆಚ್ಚಿಸಿ, 2023-24 ನೇ ಸಾಲಿನಿಂದ (01-04-2023) ಜಾರಿಗೆ ಬರುವಂತೆ ಪರಿಷ್ಕರಿಸಿ ಜಾರಿಗೊಳಿಸಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳು ಹಾಗೂ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಕೃಷ್ಣ ಭಾಜಪೇಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.