ಶೇ 21 ಡಿವಿಡೆಂಡ್ ಪ್ರಕಟಿಸಿದ ವರದವಿನಾಯಕ ಕ್ರೆಡಿಟ್ ಸಹಕಾರ ಸಂಘ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.19: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ನಿನ್ನೆ   ಇಲ್ಲಿನ ವರದವಿನಾಯಕ ಕ್ರೆಡಿಟ್ ಸಹಕಾರ ಸಂಘದ 12 ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಸಂಸ್ಥಾಪಕ ಎನ್.ಅಯ್ಯಪ್ಪ, ಅಧ್ಯಕ್ಷ ಜಾನೆಕುಂಟೆ ಎಸ್. ನೇಪಾಕ್ಷಪ್ಪ  ಅಧ್ಯಕ್ಷತೆಯಲ್ಲಿ ನಡೆಯಿತು.
ಕಳೆದ 2022-23 ನೇ ಸಾಲಿನಲ್ಲಿ ನಡೆಸಿದ ವ್ಯವಹಾರದಿಂದ 58 ಲಕ್ಷ ರೂಗಳ‌ ನಿವ್ವಳ ಲಾಭವನ್ನು ಸಂಘ ಗಳಿಸಿದೆ. ಇದರಿಂದಾಗಿ ಸಂಘದ ಸದಸ್ಯರಿಗೆ ಶೇ. 21 ರಷ್ಟು ಡಿವಿಡೆಂಡ್ ನೀಡಲಿದೆಂದು ಸಭೆಯಲ್ಲಿ ತಿಳಿಸಲಾಯ್ತು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ಉಡೇದ ಬಸವರಾಜ್, ಕೆ.ವಿ.ಭಾಸ್ಕರ್ ರಾವ್,   ಕೋಳೂರು ಮಲ್ಲಿಕಾರ್ಜುನಗೌಡ, ವಿ.ಆಂಜನೇಯಲು, ಖಾಸಿಂ ಸಾಬ್, ಈರಪ್ಪ, ಮುಖ್ಯ ಕಾರ್ಯನಿರ್ವಹಕ ಎನ್ ಪ್ರಭು ಮೊದಲಾದವರು ಇದ್ದರು.
ವೀಣಾ ಪರುಶುರಾಮ್ ಪ್ರಾರ್ಥನೆ. ಹೊಸೂರು ಈಶ್ವರಗೌಡ  ಕಾರ್ಯಕ್ರಮ  ನಿರ್ವಹಣೆ ಮಾಡಿದರು.