
ಕುಂದಗೋಳ ಮೇ.11 : ತಾಲ್ಲೂಕಿನ ಮತ್ತಿಗಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2022-23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಶೇ. 100% ಆಗಿರುತ್ತದೆ. ಪರೀಕ್ಷೆಯಲ್ಲಿನ 47 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ(ಹೈಯರ ಡಿಸ್ಟಿಂಕ್ಷನ್)ನಲ್ಲಿ(ಶೇ90ಕ್ಕಿಂತ ಹೆಚ್ಚು) ಪಾಸಾಗಿದ್ದು, 32 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ವಿದ್ಯಾರ್ಥಿನಿಯರಾದ ಅಪೇಕ್ಷಾ ಸರಾವರಿ ಹಾಗೂ ಚನಬಸವ್ವ ಗೋಕಾವಿ ಶೇ. 97.12% (625ಕ್ಕೆ 607) ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದರೆ, ಚೈತ್ರಾ ನಾಡಗೌಡರ್ ಶೇ 94.56%(625ಕ್ಕೆ 591) ದ್ವಿತೀಯ ಸ್ಥಾನ ಪಡೆದಿದ್ದಾಳೆ. ಸಾಕ್ಷಿ ಪಾಟೀಲ್ ಶೇ 94.24%(625ಕ್ಕೆ 585) ಅಂಕ ಪಡೆದು ಶಾಲೆಗೆ ತೃತೀಯ ಸ್ಥಾನ ಪಡೆದ ಇವರನ್ನು ಪ್ರಾಚಾರ್ಯ ಮಧುಕರ ಭೋಸಲೆ ಹಾಗೂ ಸರೋಜಾ ಹಳಕಟ್ಟಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾಧಿಕಾರಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ ಅಲ್ಲಾಬಕ್ಷ ಎಮ್. ಎಸ್, ಜಿಲ್ಲಾ ಸಮನ್ವಯ ಅಧಿಕಾರಿ ಎಮ್ ಎ ಹುಲಗೆಜ್ಜಿ ಮತ್ತು ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.