
ಬ್ಯಾಡಗಿ,ಮೇ.16: ಸಿಬಿಎಸ್‍ಈ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಮೋಟೆಬೆನ್ನೂರಿನ ಬಳ್ಳಾರಿ ರುದ್ರಪ್ಪ ವಸತಿ ಶಾಲೆಗೆ ಶೇ.100 ಫಲಿತಾಂಶ ಪಡೆದಿದ್ದು ಸತತ 6ನೇ ಬಾರಿಗೆ ಶೇ.100% ಯಶಸ್ಸು ಪಡೆದಿದೆ.
ಪರೀಕ್ಷೆ ಬರೆದ 55 ವಿದ್ಯಾರ್ಥಿಗಳ ಪೈಕಿ 11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲೂ, 35 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೂ 9 ವಿದ್ಯಾರ್ಥಿಗಳು ದ್ವಿತೀಯಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ.92.2 ಅಂಕಪಡೆದ ಸ್ಪೂರ್ತಿ ಕುಂದಗೋಳ ಶಾಲೆಗೆ ಪ್ರಥಮ, ಶೇ.88.4% ಅಂಕ ಪಡೆದ ಕೆ.ಕೆ.ತೇಜಶ್ರೀ ದ್ವಿತೀಯ, ಶೇ.87.4% ಪಡೆದ ಚೇತನ ಅರ್ಕಾಚಾರಿ ತೃತೀಯ ಸ್ಥಾನ ಪಡೆದಿದ್ದಾರೆ.
ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ಬಳ್ಳಾರಿ ರುದ್ರಪ್ಪ ಶಿಕ್ಷಣ ಟ್ರಸ್ಟ್‍ನ ಅಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಕಾರ್ಯದರ್ಶಿ ಎಸ್.ಆರ್.ಬಳ್ಳಾರಿ, ಖಜಾಂಚಿ ಚನ್ನವೀರಪ್ಪ ಬಳ್ಳಾರಿ, ಪ್ರಾಚಾರ್ಯ ಮನೀಶ್ ಅರಿಂಬಿಲ್ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.