ಶೇ. 100ರಷ್ಟು ಸಾಧನೆ

ಬಾದಾಮಿ, ಮೇ16: 2023-24ನೇ ಸಾಲಿನ ಸಿಬಿಎಸ್‍ಇ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ಚೊಳಚಗುಡ್ಡ ಗ್ರಾಮದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾದ ಶಾಕಂಭರೀ ವಿದ್ಯಾನಿಕೇತನ ಸಿಬಿಎಸ್‍ಇ ಚೊಳಚಗುಡ್ಡ ಶಾಲೆಗೆ ಶೇ.100 ರಷ್ಟು ಫಲಿತಾಂಶ ಬಂದಿದೆ. 10ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದು, ವಿದ್ಯಾರ್ಥಿಗಳಾದ ಕುಮಾರ. ತರುಣಕಕರೆಡ್ಡಿ ಶೇ. 95.33% ಪ್ರಥಮ, ಕುಮಾರ ಉಲ್ಲಾಸ ಕಲಹಾಲ ಶೇ.87% ದ್ವಿತೀಯ ಮತ್ತು ಅಭಯದೇವಾಡಿಗ ಶೇ 81% ತೃತೀಯ ಸ್ಥಾನ ಪಡೆದು ಶಾಲೆಯ ಘಣತೆ ಹೆಚ್ಚಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಚೇರಮನ್ ಡಾ.ಬಸವರಾಜ ಮುಲ್ಕಿಪಾಟೀಲ, ಗೌರವ ಕಾರ್ಯದರ್ಶಿ ಡಾ.ಗಿರೀಶ ದಾನಪ್ಪಗೌಡರ ಹಾಗೂ ಶಾಲಾ ಪ್ರಾಚಾರ್ಯ ರಮೇಶ ಶಹಬಾದ ಮತ್ತು ಎಲ್ಲಾ ಶಾಲಾ ಸಿಬ್ಬಂದಿ, ಆಡಳಿತ ಮಂಡಳಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.