ಶೇ. ೯೬ ರಷ್ಟು ಇಡಿ ದಾಖಲಾತಿ ಪ್ರಕರಣಗಳಿಗೆ ಶಿಕ್ಷೆ

ನವದೆಹಲಿ,ಮಾ.೧೬- ರಾಜಕೀಯ ಕಾರಣಗಳಿಗಾಗಿ ತನಿಖೆ ಪ್ರಾರಂಭಿಸಲಾಗಿದೆ ಎನ್ನುವ ಆರೋಪದ ನಡುವೆಯೇ ಹಣ ಲೇವಾದೇವಿ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ದಾಖಲು ಮಾಡಿಕೊಂಡ ಪ್ರಕರಣಗಳಲ್ಲಿ ಶೇ ೯೬ ರಷ್ಟು ಶಿಕ್ಷೆ ಆಗಿದೆ.
ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಪೂರ್ಣಗೊಂಡ ೨೫ ಪ್ರಕರಣಗಳಲ್ಲಿ ೨೪ ರಲ್ಲಿ ೪೫ ಆರೋಪಿಗಳಿಗೆ ಶಿಕ್ಷೆ ಆಗಿದೆ. ಇತರೆ ೧,೧೪೨ ಪ್ರಕರಣಗಳ ವಿಚಾರಣೆ ಪ್ರಗತಿಯಲ್ಲಿದ್ದು ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ತಿಳಿಸಿದೆ.
ಪಿಎಂಎಲ್‌ಎ ಹೊಸ ಕಾನೂನನ್ನು ೨೦೦೫ ರಲ್ಲಿ ಮಾತ್ರ ಜಾರಿಗೆ ತಂದಿದೆ. ಆದಾದ ಬಳಿಕ ವಿಚಾರಣೆ ತ್ವರಿತಗೊಳಿಸಲಾಗಿದೆ. ಐಪಿಸಿ ಅಡಿಯಲ್ಲಿ ಮೊಕದ್ದಮೆ ಹೂಡಲಾದ ಪ್ರಕರಣಗಳಲ್ಲಿ ಹೆಚ್ಚಿನ ಶಿಕ್ಷೆಯ ಪ್ರಮಾಣ ಶೇ. ೫೬ ಕ್ಕಿಂತ ಹೆಚ್ಚಾಗಿದೆ ಎಂದು ತಿಳಿಸಿದೆ.
ಯುಪಿಎ ಅಧಿಕಾರದಲ್ಲಿದ್ದಾಗ ೨೦೦೫ ರಿಂದ ಜಾರಿ ನಿರ್ದೇಶನಾಲಯ ದಾಖಲಿಸಿದ ೫,೯೦೬ ಪ್ರಕರಣಗಳಲ್ಲಿ ಶೇ. ೩ ರಷ್ಟು ಹಾಲಿ ಅಥವಾ ಮಾಜಿ ಶಾಸಕರ ವಿರುದ್ಧ ದಾಖಲಾಗಿವೆ ಎಂದು ಮೂಲಗಳು ತಿಳಿಸಿವೆ.
ವಿಶೇಷ ಪಿಎಂಎಲ್‌ಎ ನ್ಯಾಯಾಲಯ ತನ್ನ ಹಾಗೂ ಪುತ್ರನ ವಿರುದ್ಧದ ಅನೇಕ ಚಾರ್ಜ್‌ಶೀಟ್ ಹಾಕಿದ್ದರೂ, ವಿಚಾರಣೆಯನ್ನು ತ್ವರಿತಗೊಳಿಸುವ ಪ್ರಾಸಿಕ್ಯೂಷನ್ ಪ್ರಯತ್ನ ಯಶಸ್ವಿಯಾಗಿ ವಿಫಲಗೊಳಿಸಲು ರಾಜಕಾರಣಿಯೊಬ್ಬರು ದೆಹಲಿ ಹೈಕೋರ್ಟ್‌ಗೆ ಮೊರೆ ಹೋದರು.
ಈ ಅವಧಿಯಲ್ಲಿ ಜಾರಿ ನಿರ್ದೇಶನಾಲಯ ಸುಮಾರು ೨,೦೦೦ ಅಟ್ಯಾಚ್‌ಮೆಂಟ್ ಆರ್ಡರ್‌ಗಳಲ್ಲಿ ೧.೧೫ ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿದೆ.
೨೦ ಸಾವಿರ ವಸೂಲಿ
ಮುಟ್ಟುಗೋಲು ಹಾಕಿಕೊಂಡಿದ್ದ ಆಸ್ತಿ ಮಾರಾಟ ಮಾಡಿ ಬ್ಯಾಂಕ್‌ಗಳಿಗೆ ಪಾವತಿಸಬೇಕಾದ ಹಣ ಹಿಂದಿರುಗಿಸುವ ಮೂಲಕ ೨೦,೦೦೦ ಕೋಟಿ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ಪರಾರಿಯಾಗಿರುವ ಆರ್ಥಿಕ ಅಪರಾಧಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಗೆ ಸೇರಿದ ಆಸ್ತಿಗಳ ಮಾರಾಟದಿಂದ ಹೆಚ್ಚಿನ ವಸೂಲಿ ಮಾಡಲಾಗಿದೆ ಎಂದು ತಿಳಿಸಿದೆ.