ಶೇ.೯೫ರಷ್ಟು ಮತದಾನ ಮಾಡಿದ ಹಿರಿಯರು

ದೇವದುರ್ಗ,ಮೇ.೦೫- ಸ್ಥಳೀಯ ವಿಧಾನಸಭೆ ಚುನಾವಣೆಗಾಗಿ ಗುರುವಾರ ಜರುಗಿದ ಹಿರಿಯರ ಅಂಚೆಮತದಾನದಲ್ಲಿ ಶೇ.೯೫.೦೬ವೋಟಿಂಗ್‌ಆಗಿದ್ದು, ಎಲ್ಲೆಡೆ ಶಾಂತಿಯುತವಾಗಿ ನಡೆಯಿತು.
ತಾಲೂಕಿನಲ್ಲಿ ೨,೩೧,೧೫೭ ಮತದಾರರಿದ್ದು ೮೦ವರ್ಷ ಮೇಲ್ಪಟ್ಟವರು ೩೨೪೬, ಅಂಗವಿಕಲರು ೨೪೪೪ ಮತದಾರರಿದ್ದು, ಮನೆಯಿಂದಲೇ ಅಂಚೆ ಮತದಾನ ಮಾಡಲು ೪೬೬ಜನರು ನೋಂದಾಯಿಸಿಕೊಂಡಿದ್ದರು. ೩೭೧ಜನರು ೮೦ವರ್ಷ ಮೇಲ್ಪಟ್ಟ, ೯೫ಅಂಗವಿಕಲರು ಮನೆಯಿಂದ ವೋಟ್ ಮಾಡಲು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ ೩೫೫ಹಿರಿಯ ನಾಗರಿಕರು, ೮೮ಅಂಗವಿಕಲರು ಸೇರಿ ೪೪೩ಜನರು ಮತದಾನ ಮಾಡಿದ್ದು ಶೇ.೯೫.೦೬ ವೋಟಿಂಗ್‌ಆಗಿದೆ. ೧೬ಹಿರಿಯ ನಾಗರಿಕರು, ೭ಅಂಗವಿಕಲರು ಸೇರಿ ೨೩ಮತದಾರರು ನಾನಾ ಕಾರಣದಿಂದ ದೂರ ಮತದಾನ ಮಾಡಿಲ್ಲ.
ಪಟ್ಟಣ ಸೇರಿ ನಾಲ್ಕು ಹೋಬಳಿಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದರು. ಶಾಂತಿಯುತವಾಗಿ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಚುನಾವಣಾಧಿಕಾರಿ ಎಂ.ಎನ್.ಚೇತನ್‌ಕುಮಾರ ತಿಳಿಸಿದ್ದಾರೆ.