ಶೇ. ನೂರರಷ್ಟು ಫಲಿತಾಂಶ

ಗುಳೇದಗುಡ್ಡ, ಮೇ16: ಪಟ್ಟಣದ ನೆಹರು ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಸಿಬಿಎಸ್‍ಇ ಹತ್ತನೇ ತರಗತಿಯ ಫಲಿತಾಂಶ ಶೇ.100ರಷ್ಟಾಗಿದೆ. ಪರೀಕ್ಷೆಗೆ ಒಟ್ಟು 61 ವಿದ್ಯಾರ್ಥಿಗಳು ಹಾಜರಾಗಿದ್ದು, ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಅಮೋಘ ಸಂಗಮ ಶೇ.92 ಅಂಕಗಳೊಂದಿಗೆ ಶಾಲೆಗೆ ಪ್ರಥಮ, ಜ್ಯೋತಿ ಹುಲ್ಲೂರ ಶೇ.87 ಅಂಕಗಳೊಂದಿಗೆ ದ್ವಿತೀಯ, ಪ್ರಗತಿ ಘಟ್ನೂರ ಶೇ.86 ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ, ಈಶ್ವರಿ ಶಿವಪ್ಪಯ್ಯನಮಠ ಶೇ. 85, ಸಿಂಚನಾ ಅಮರಿ ಶೇ.84 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹೊಳಬಸು ಶೆಟ್ಟರ್, ಅಧ್ಯಕ್ಷ ಮಹಾಂತಯ್ಯ ಸರಗಣಾಚಾರಿ ಅಭಿನಂದಿಸಿದ್ದಾರೆ.