ಶೇಷಗಿರಿ ಬೀಡಕರ ಪುಸ್ತಕ ಬಿಡುಗಡೆ

ಕಲಬುರಗಿ ಮಾ 28: ದಾಸ ಸಾಹಿತ್ಯ ಅಕಾಡೆಮಿ ವತಿಯಿಂದ ನಿವೃತ್ತ ಬ್ಯಾಂಕ್ ಅಧಿಕಾರಿ ಶೇಷಗಿರಿ ಬೀಡಕರ ಅವರ ಯೇನ ಕೇನ ಪ್ರಕಾರೇಣ ಸರಣಿಯ 9 ನೆಯ ಪುಸ್ತಕ, ಕ್ಷಣ ತುತ್ತುಗಳು ಕೊರೋನ ಹಾವಳಿಯಲ್ಲಿ ರಸಾಯನ ಪುಸ್ತಕ ಬಿಡುಗಡೆ ಜರುಗಿತು. ಬಾಬುರಾವ್ ಕೊರಳ್ಳಿ ಬಿಡುಗಡೆ ಮಾಡಿದರು,ಪತ್ರಕರ್ತ ಶೇಷಮೂರ್ತಿ ಅವಧಾನಿ ಅವರು ಪುಸ್ತಕಪರಿಚಯಿಸಿದರು.ಭಾರತ ವಿಕಾಸರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕøತ,ಸಮಾಜ ಸೇವಕರಾದ ಮುರಳೀಧರ ಜಿ ಕರಲಗಿಕರ್ ಅವರಿಗೆ ಸನ್ಮಾನ ಜರುಗಿತು.ಶಾಮಸುಂದರ ಕುಲಕರ್ಣಿ ನಿರೂಪಿಸಿದರು, ದಾಸ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರವಿ ಲಾತೂರಕರ ವಂದನಾರ್ಪಣೆ ಸಲ್ಲಿಸಿದರು. ಪಾರಾಯಣದ ಸದಸ್ಯರಾದ ಅಪ್ಪಾರಾವ್ ಟಕ್ಕಳಕಿ,ಪತ್ರಕರ್ತರಾದ ಜಯತೀರ್ಥ ಕಾಗಲಕರ,ಶೇಷಗಿರಿ ಹುಣಸಗಿ,ರಂಗರಾವ್ ಕುಲಕರ್ಣಿ, ಆಶಿಶ್,ಗುಂಡು ಚೌಧರಿ,ಪಾರ್ಥಸಾರಥಿ, ಅನಿಲ ಕುಲಕರ್ಣಿ,ಕೆ.ಬಿ ಕುಲಕರ್ಣಿ,ಆರ್.ಕೆ ಕುಲಕರ್ಣಿ,ಗಿರೀಶ್ ಕುಲಕರ್ಣಿ, ಶ್ರೀನಿವಾಸ ಆಚಾರ್ಯ,ಉಮೇಶ್ ಗೊಡಬೋಲೆ, ವಿಜಯರಾವ ಉಪಸ್ಥಿತರಿದ್ದರು.