
ಮುಂಬೈ.ಏ೨೪:ಸಾಲ ಮರುಪಾವತಿ ಮಾಡುವ ನಿಟ್ಟಿನಲ್ಲಿ ಅದಾನಿ ಸಮೂಹದ ಅದಾನಿ ಪೋರ್ಟ್ಸ್ ಹಾಗೂ ಸ್ಪೆಷಲ್ ಎಕನಾಮಿಕ್ ರೋನ್ ಲಿಮಿಟೆಡ್ ಕಂಪನಿಯು ಷೇರುಗಳನ್ನು ಮರು ಖರೀದಿ ಮಾಡುವುದಾಗಿ ಘೋಷಣೆ ಮಾಡಿದೆ.
೨೦೨೪ರ ಜುಲೈ ತಿಂಗಳ ಒಳಗಾಗಿ ಪಾವತಿ ಮಾಡಬೇಕಿರುವ ಕೆಲವೊಂದು ಸಾಲಗಳನ್ನು ಮರುಪಾವತಿ ಮಾಡಲು ಹೀಗೆ ಮಾಡುತ್ತಿರುವುದಾಗಿ ಹೇಳಿದೆ.
ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಸಮೂಹದ ಷೇರುಗಳ ಮೌಲ್ಯವು ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಹೀಗಾಗಿ ಹೂಡಿಕೆದಾರರ ವಿಶ್ವಾಸ ಗಳಿಸುವ ಸಲುವಾಗಿ ಷೇರುಗಳನ್ನು ಮರು ಖರೀದಿ ಮಾಡುವ ಮೂಲಕ ಸಾಲದ ಹೊರೆಯನ್ನು ತಗ್ಗಿಸಲು ಅದಾನಿ ಸಮೂಹವು ಮುಂದಾಗಿದೆ.ಸುಮಾರು ೧೩೦ ಮಿಲಿಯನ್ ಡಾಲರ್ ಮೌಲ್ಯದ ಷೇರುಗಳನ್ನು ಮರು ಖರೀದಿ ಮಾಡಲು ಕಂಪನಿ ಮುಂದಾಗಿದೆ ಎಂದು ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ದಾಖಲೆಯಲ್ಲಿ ಹೇಳಿದೆ.
ಜನವರಿಯಲ್ಲಿ ಹೊರಬಿದ್ದ ಹಿಂಡನ್‌ಬರ್ಗ್ ವರದಿ ಬಳಿಕ ಅದಾನಿ ಸಮೂಹವು ಸುಮಾರು ೧೧೪ ಬಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿತ್ತು.