ಶೇಕ್ಸ್ ಪಿಯರ್ ಮುಪ್ಪಿಲ್ಲದ, ಸಾವಿಲ್ಲದ ನಾಟಕಕಾರ: ಪೆÇ್ರ. ಬಸವರಾಜ ಡೋಣೂರ.

ಧಾರವಾಡ ಮೇ.17-ನಾಲ್ಕು ನೂರು ವರ್ಷಗಳ ಹಿಂದೆ ಜೀವಿಸಿದ್ದ ಶೇಕ್ಸ್ ಪಿಯರನ ಬರಹಗಳನ್ನು ಇಂದಿಗೂ ಏಕೆ ಓದಬೇಕು? ಅವನ ನಾಟಕಗಳನ್ನು ಈಗಲೂ ಏಕೆ ನೋಡಬೇಕು? ಎಂಬ ಪ್ರಶ್ನೆಗಳನ್ನು ಕಾಲಕಾಲಕ್ಕೆ ವಿದ್ವಾಂಸರು ಕೇಳಿಕೊಂಡಿದ್ದಾರೆ. ಶೇಕ್ಸ್ ಪಿಯರನ ನಾಟಕಗಳಲ್ಲಿ ನಮ್ಮ ಸಮಕಾಲೀನ ಅನೇಕ ಜ್ವಲಂತ ಸಮಸ್ಯೆಗಳಿಗೆ, ನಮ್ಮ ತಲ್ಲಣ, ಸಂಕಟ, ದುಃಖ-ದುಮ್ಮಾನಗಳಿಗೆ ಉತ್ತರ ಸಿಗುವುದರಿಂದ ಮತ್ತು ನಮ್ಮ ವೈಯಕ್ತಿಕ, ಸಮುದಾಯಿಕ ಬದುಕಿನಲ್ಲಿ ಎದುರಾಗುವ ಅತ್ಯಂತ ಗಂಭೀರ ಸಮಸ್ಯೆಗಳಿಗೆ ಅವನ ನಾಟಕಗಳಲ್ಲಿ ಪರಿಹಾರ ಸಿಗುವುದರಿಂದ ಅವನ ನಾಟಕಗಳನ್ನು ಓದಬೇಕಾಗಿದೆ. ಶೇಕ್ಸ್ ಪಿಯರ್ ತನ್ಮ ವಸ್ತು, ಪಾತ್ರ ಮತ್ತು ಭಾμÉಯ ಮೂಲಕ ನಮ್ಮ ಚಿಂತನಕ್ರಮದ ಭಾಗವಾಗಿದ್ದಾನೆ. ಗಟ್ಟಿಯಾದ ಕತೆ ಹೇಳುವ, ಅದ್ಭುತ ಜೀವನ ದರ್ಶನ ಕಟ್ಡಿಕೊಡುವ ಮತ್ತು ಚಕಿತಗೊಳಿಸುವಂಥ, ಆಳವಾಗಿ ತಟ್ಡುವಂಥ ಭಾμÉಯನ್ನು ಬಳಸುವದರಿಂದ ನಾವು ಶೇಕ್ಸ್ ಪಿಯರನನ್ನು ಓದಬೇಕು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ.ಬಸವರಾಜ ಡೋಣೂರ ಹೇಳಿದರು
ಶೇಕ್ಸ್ ಪಿಯರ್ ಜನ್ಮದಿನದ ಅಂಗವಾಗಿ ಧಾರವಾಡ ಕಟ್ಟೆ ಆಯೋಜಿಸಿರುವ ಶೇಕ್ಸ್ ಪಿಯರ್ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಶೇಕ್ಸ್ ಪಿಯರನನ್ನು ಏಕೆ ಓದಬೇಕು?” ಎಂಬ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.
ಎಲ್ಲಾ ಭಾμÉಗಳಲ್ಲಿನ ಮೇರು ಕೃತಿಗಳನ್ನು ಮತ್ತೆ ಮತ್ತೆ ಓದಬೇಕು, ಅವುಗಳ ಜೊತೆಗೆ ಮುಖಾಮುಖಿಯಾಗಬೇಕು, ಕಾಲಕಾಲಕ್ಕೆ ಅವುಗಳೊಂದಿಗೆ ವಾದಕ್ಕೀಳಿಯಬೇಕು ಮತ್ತು ಜೀವಂತ ಸಂಬಂಧವನ್ನು ಇಟ್ಟುಕೊಳ್ಳಬೇಕು. ಇದು ಒಬ್ಬ ಲೇಖಕನನ್ನು ಜೀವಂತವಾಗಿಡುವ ಕ್ರಮ ಮತ್ತು ಅವನನ್ನು ನಮ್ಮ ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತಗೊಳಿಸುವ ಕ್ರಮವೂ ಆಗಿದೆ ಎಂದರು.
ಶೇಕ್ಸ್ ಪಿಯರನ ನಾಟಕಗಳು ಮತ್ತು ಅವನ ಸುನೀತಗಳು ಓದುಗರನ್ನು ಇಂದಿಗೂ ಕಾಡುತ್ತವೆ. ನಮ್ಮ ಸಮಕಾಲೀನ ಅನೇಕ ಸಂಕಷ್ಟಗಳಿಗೆ, ಸಮಸ್ಯೆಗಳಿಗೆ, ಬಿಕ್ಕಟ್ಟುಗಳಿಗೆ, ಪ್ರಶ್ನೆಗಳಿಗೆ ಉತ್ತರ ಶೇಕ್ಸ್ ಪಿಯರನ ನಾಟಕಗಳಲ್ಲಿ ಸಿಗುತ್ತವೆ.
ಶೇಕ್ಸ್ ಪಿಯರ್ ಒಬ್ಬ ಅದ್ಬುತ ಕತೆಗಾರ ಮತ್ತು ಅಪ್ಯಾಯಮಾನವಾಗಿ ಕಾಣುವ ಬರಗಾರ ಎನ್ನುವುದಕ್ಕೆ ಅವನ ನಾಟಕಗಳು ಸಾಕ್ಷಿಯಾಗಿವೆ. ಅವನ ನಾಟಕಗಳ ಮೇಲೆ ಇಂದಿಗೂ ಹಲವಾರು ರೀತಿಯಲ್ಲಿ ಪ್ರಯೋಗಗಳು ನಡೆದಿವೆ. ಒಂದು ಅದ್ಭುತವಾದ ದರ್ಶನ, ಒಂದು ಅದ್ಭುತವಾದ ಕತೆಯ ಮೂಲಕ ಅಭಿವ್ಯಕ್ತಿಗೊಳ್ಳಲು ಸಾಧ್ಯವಿದೆ ಎನ್ನುವುದನ್ನು ತೋರಿಸಿಕೊಟ್ಟ ಶೇಕ್ಸ್ ಪಿಯರ್ ಎಲ್ಲಾ ಕಾಲಘಟ್ಟಗಳ, ಎಲ್ಲಾ ಬರಹಗಾರರಿಗೆ ಮಾದರಿಯಾಗಿ ನಿಲ್ಲುತ್ತಾನೆ.
ಶೇಕ್ಸ್ ಪಿಯರನ ನಾಟಕಗಳು ಭಾμÉಯ ಕುರಿತು ವ್ಯಾಖ್ಯಾನ ನೀಡಿವೆ. ಹ್ಯಾಮ್ಲೆಟ್ ” ಪದಗಳು, ಪದಗಳು ಪದಗಳು” ಎಂದು ಏಕೆ ಹೇಳುತ್ತಾನೆ? ಭಾμÉ ಮನುಷ್ಯನ ಕ್ರಿಯೆಯನ್ನು ಅನುಕರಣೆ ಮಾಡುತ್ತಿರುತ್ತದೆ, ಭಾಷಂತರಿಸುತ್ತದೆ. ಮನುಷ್ಯನ ಬದುಕಿನಲ್ಲಿ ನೈತಿಕತೆ ಇರದಿದ್ದರೆ ಭಾμÉಯಲ್ಲಿ ಅದು ವ್ಯಕ್ತವಾಗುವುದಿಲ್ಲ. ಪತ್ನಿ ಪತಿಗೆ ಮೋಸ ಮಾಡಿದರೆ, ತಮ್ಮ ಅಣ್ಣನಿಗೆ ಮೋಸ ಮಾಡಿದರೆ ಪದಗಳು ಪದಗಳೇ ಆಗಿ ಉಳಿಯುತ್ತವೆ ಎಂದು ಶೇಕ್ಸ್ ಪಿಯರ್ ಹೇಳುತ್ತಾನೆ.
ಶೇಕ್ಸ್ ಪಿಯರನಿಗೆ ಜೀವನದ ಬಗ್ಗೆ ಸ್ಪಷ್ಟವಾದ ನಿಖರತೆ ಮತ್ತು ಖಚಿತತೆ ಇತ್ತು. ಪ್ರೀತಿ, ಪ್ರೇಮ, ಸ್ನೇಹ, ಸಿಟ್ಟು, ದ್ವೇಷ, ಅಸೂಯೆ, ಅಧಿಕಾರ ದಾಹ, ಕನಸು, ಕೊಲೆ, ನಿμÉ್ಠ, ಸಾವು, ಪಾಪ ಹೀಗೆ ಮನುಷ್ಯ ಜೀವನದ ಅತ್ಯಂತ ಸೂಕ್ಷ್ಮ ಸಂವೇದನೆಗಳನ್ನು ಅವನು ತನ್ನ ನಾಟಕಗಳಲ್ಲಿ ಮತ್ತು ಸುನೀತಗಳಲ್ಲಿ ಸ್ಪಷ್ಟವಾಗಿ ಅಭಿವ್ಯಕ್ತಪಡಿಸಿದ್ದಾನೆ.
‘ಪೆÇ್ರ. ಎನ್. ಎಸ್. ಗುಂಡೂರ ಧಾರವಾಡ ಕಟ್ಟೆಯ ಕುರಿತು ಮಾತನಾಡಿದರು. ಜ್ಞಾನಾಸಕ್ತರ ಪಾಲಿಗೆ ಒಂದು ಉತ್ತಮ ವೇದಿಕೆ ಆಗಿದೆ ಎಂದರು. ಶೇಕ್ಸ್ಪಿಯರ್ ಕುರಿತ ಮಾತುಗಳಿಗೆ ಸೈದ್ಧಾಂತಿಕವಾದ ಚೌಕಟ್ಟನ್ನು ಹಾಕಿಕೊಡುವ ಅಗತ್ಯವಿದೆ ಎಂದರು. ಶೇಕ್ಸ್ ಪಿಯರÀನ ಜನಪ್ರಿಯತೆಯ ಹಿಂದಿನ ಐತಿಹಾಸಿಕ ಕಾರಣಗಳನ್ನು ತಿಳಿಯುವ ಮತ್ತು ಅವನನ್ನು ಜಾಗತಿಕ ಮಟ್ಟದ ಲೇಖಕನನ್ನಾಗಿಸುವಲ್ಲಿ ವಸಾಹತುಶಾಹಿ ಮಹತ್ವದ ಪಾತ್ರ ಇದೆ, ಪ್ರತಿಭೆಯಲ್ಲಿ ಶೇಕ್ಸ್ ಪಿಯರನಿಗೆ ಸಮಾನವಾದ ಲೇಖಕರಿದ್ದರೂ ಅವನು ಏಕೆ ವಿಭಿನ್ನವಾಗಿ ನಿಲ್ಲುತ್ತಾನೆ ಎಂಬುದಕ್ಕೆ ಗುಂಡೂರ ಕಾರಣಗಳನ್ನು ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಶೇಕ್ಸ್‍ಪಿಯರ್ ಕುರಿತಾಗಿ ಮತ್ತಷ್ಟು ವಿಚಾರಗಳು ಮುನ್ನೆಲೆಗೆ ಬಂದವು.
ಧಾರವಾಡ ಕಟ್ಟೆಯ ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮೀ ದಾನರಡ್ಡಿ ನಿರೂಪಿಸಿದರು, ಕಾರ್ಯದರ್ಶಿ ಡಾ. ಪ್ರಕಾಶ್ ಬಾಳಿಕಾಯಿ, ಸಮಂತ್ ಪತ್ತಾರ, ಭಾಗ್ಯಶ್ರೀ ವಿರಕ್ತಮಠ ತಾಂತ್ರಿಕ ನೆರವು ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಡಿ.ಎಂ.ಹಿರೇಮಠ, ಅರವಿಂದ್ ಕುಲಕರ್ಣಿ, ಕಾಂಚನಾ ಗಾವಂಕರ್, ಇಂದಿರಾ ಪಾಟೀಲ್, ಆಶಾ ರಬ್, ಎಸ್.ಐ ಡೋಣೂರ ಮುಂತಾದವರು ಉಪಸ್ಥಿತರಿದ್ದರು.