
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಜು.22: ತಾಲೂಕಿನಲ್ಲಿ ಕೆಲ ಮೂರು ದಿನಗಳಿಂದ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ಬಿತ್ತನೆಗೆ ಉತ್ತಮವಾಗಿರುವ ಹಿನ್ನೆಲೆ ರೈತರು ಕೃಷಿ ರೈತ ಸಂಪರ್ಕ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ ಮುಗಿ ಬಿದ್ದು ಶೇಂಗಾ, ರಾಗಿ ಖರೀದಿಸಿದರು.
ಕಳೆದ 15 – 20 ದಿನಗಳ ಹಿಂದೆ ಸುರಿದ ಮಳೆಗೆ ಕೆಲ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದು, ಮೆಕ್ಕೆಜೋಳ ಬಿತ್ತನೆ ಹಿಂದಾದರೆ ರೋಗ ಬಾಧೆ ಕಾಡುತ್ತೆ ಎಂಬ ಕಾರಣಕ್ಕೆ, ಕೆಲ ರೈತರು ಹಿಂದೇಟು ಹಾಕುತ್ತ ಮೆಕ್ಕೆಜೋಳ ಬೀಜ ಖರೀದಿ ಪ್ರಸ್ತುತ ಕಡಿಮೆ ಆಗಿದ್ದು, ಹೆಚ್ಚಾಗಿ ರಾಗಿ ಹಾಗೂ ಶೇಂಗಾ ಖರೀದಿಗೆ ಮುಂದಾಗಿದ್ದಾರೆ ಎಂದು ಕೃಷಿ ಅಧಿಕಾರಿ ಶ್ಯಾಮ್ ಸುಂದರ್ ಮಾಹಿತಿ ನೀಡಿದರು.
ರಾಗಿಯನ್ನು ಸರ್ಕಾರ ಹೆಚ್ಚಿನ ದರದಲ್ಲಿ ಖರೀದಿ ಮಾಡುತ್ತಿರುವುದರಿಂದ,ಕೊಟ್ಟೂರು ಮತ್ತು ಉಜ್ಜಿನಿ ಎರಡು ಕೇಂದ್ರಗಳಿಂದ ಸುಮಾರು 60 ರಿಂದ 70 ಕ್ವಿಂಟಲ್ ರಾಗಿ ಮಾರಾಟ ಆಗಿದೆ, ಬೇಡಿಕೆ ಇದ್ದು ಇನ್ನೂ15 ಕ್ವಿಂಟಲ್ ಕೆಲ ದಿನಗಳಲ್ಲಿ ಎಂದು ತಿಳಿಸಿದರು.
ಎರಡೂ ಕೇಂದ್ರಕ್ಕೆ ಸೇರಿ ಪ್ರಸ್ತುತ 60 ಕ್ವಿಂಟಲ್ ಶೇಂಗಾ ಬಂದಿದ್ದು, ಸಾಮಾನ್ಯ ವರ್ಗದ ರೈತರಿಗೆ 30 ಕೆ.ಜಿ ಪಾಕೆಟ್ ಶೇಂಗಾ ಕ್ಕೆ 2235 ರೂ. ,ಎಸ್ಸಿ/ಎಸ್ಟಿ ರೈತರಿಗೆ 2025 ರೂ.ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದರು.
ರಾಗಿ ಖಾಲಿಯಾಗಿದ್ದ ಕಾರಣ ಜಿಟಿ ಜಿಟಿ ಮಳೆಯಲ್ಲಿಯೇ ರೈತರು ಶೇಂಗಾ ಖರೀದಿಸಿ ಹೊತ್ತೊಯ್ದರು.
One attachment • Scanned by Gmail