ಶೆಳ್ಳಿಗಿ ಗ್ರಾಮದಲ್ಲಿ ಕಾಲ್ನಡಿಗೆ ಜಾಥಾ-ಮತದಾನ ಜಾಗೃತಿ

ವಿಜಯಪುರ:ಎ.20: ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಬುಧವಾರ ತಾಳಿಕೋಟಿ ತಾಲೂಕಿನ ಭಂಟನೂರ ಗ್ರಾಮ ಪಂಚಾಯತಿಯ ಶಳ್ಳಿಗಿ ಗ್ರಾಮದಲ್ಲಿ ಮತದಾನ ಜಾಗೃತಿ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಲಾಯಿತು.
ಮತದಾರರ ಪ್ರತಿಜ್ಞಾವಿಧಿ ಭೋಧನೆ: ಪ್ರಜಾಪ್ರಭುತ್ವದಲ್ಲಿ ದೃಡವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ ಯಾವುದೇ ಪ್ರೇರೆಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ ಎಂದು ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.
ಚುನಾವಣಾ ಘೋಷ ವಾಕ್ಯ: ಇದೇ ಸಂದರ್ಭದಲ್ಲಿ “ನೋಂದಾಯಿಸಿ ನೋಂದಾಯಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಂದಾಯಿಸಿ, “18 ವರ್ಷ ಪೂರೈಸಿದ ಎಲ್ಲಾ ಯುವಕ ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಿ, “ಬಳಸಿ ಬಳಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಲು ವಿಎಚ್‍ಎ ಆ್ಯಪ್ ಬಳಸಿ, “ಖಚಿತ ಪಡಿಸಿ, ಖಚಿತಪಡಿಸಿ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೆಂದು ಖಚಿತಪಡಿಸಿ, “ಪರಿಶೀಲಿಸಿ ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಪರಿಶೀಲಿಸಿ, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಲು ವಿಎಚ್‍ಎ ಆ್ಯಪ್ ಬಳಸಿ, “ಯಾವುದೇ ಮತದಾರರ ಮತದಾನದಿಂದ ಹೊರಗುಳಿಯಬಾರದು” “ಮಾಡಿ ಮಾಡಿ ಮತದಾನ ಮಾಡಿ, “ಮತದಾನ ನಮ್ಮ ಹಕ್ಕು’ ಎಂಬ ಘೋಷ ವಾಕ್ಯ ಹೇಳಲಾಯಿತು.
ಇದೇ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಸುರೇಶ ದಳವಾಯಿ, ಐಇಸಿ ಸಂಯೋಜಕ ಮಲಕಪ್ಪ ಬಿ.ಎಮ್, ಪಂಚಾಯತ ಕಾರ್ಯದರ್ಶಿ ಹಣಮಗೌಡ ಚೌದ್ರಿ ಮತ್ತು ಎಸ್.ಡಿ.ಎ ಮಾಂತಮ್ಮ ಚೌದ್ರಿ ಮತ್ತು ಅಂಗನವಾಡಿ ಕಾರ್ಯಕರ್ತರು, ಗ್ರಾ.ಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.