ಶೆಲ್ಲಿಕೇರಿ ಜಯ: ವಿಜಯೋತ್ಸವ

ಕೆರೂರ, ನ 24: ಬಾಗಲಕೋಟೆ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಗೊಂಡ ಶಿವಾನಂದ ಶೆಲ್ಲಿಕೇರಿ ಅವರನ್ನು ಅಭಿನಂದಿಸಿದ ಸ್ಥಳೀಯ ನೂರಾರು ಕಲಾವಿದರು, ಸಾಹಿತ್ಯಾಭಿಮಾನಿಗಳು ಪಟ್ಟಣದಲ್ಲಿ ಪಟಾಕಿ ಸಿಡಿಸಿ, ಪರಸ್ಪರ ಗುಲಾಲು ಎರಚಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದÀ ಕಲಾವಿದರಾದ ಲಿಂಗರಾಜ ಕ್ವಾಣ್ಣೂರ, ಜಾನಪದ, ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಜನಪರ ನಿಲುವು, ಜನಪ್ರೀಯತೆ ಪಡೆದಿರುವ ಶಿವಾನಂದ ಶೆಲ್ಲಿಕೇರಿ ಅವರ ಅಭಿಮಾನದ ಗೆಲುವಿದು. ಮುಂಬರುವ ದಿನಗಳಲ್ಲಿ ಜಿಲ್ಲಾ ಕಸಾಪದ ಅಭಿವೃದ್ಧಿಗೆ ಶೆಲ್ಲಿಕೇರಿಯವರು ಉತ್ತಮ ಕೊಡುಗೆ ನೀಡುವರು ಎಂದರು.
ಕಸಾಪ ನಿಕಟಪೂರ್ವ ಬಾದಾಮಿ ತಾಲ್ಲೂಕು ಅಧ್ಯಕ್ಷ ಶಂಕರ ಹೂಲಿ, ಚಂದ್ರಶೇಖರ ನಾಗನೂರ, ಶಂಕರಗೌಡ್ರ ಗೌಡರ, ಕುಬೇರಪ್ಪ ನರಗುಂದ, ಮಹಾಂತೇಶ ಶೆಲ್ಲಿಕೇರಿ ಮಾತನಾಡಿದರು. ವಿಜಯೋತ್ಸವದಲ್ಲಿ ಹಿರಿಯ ಸಾಹಿತಿ ಸಿದ್ಧರಾಮ ಶಿರೋಳ, ಚಂದ್ರಶೇಖರ ದೇಸಾಯಿ, ನಿವೃತ್ತ ಶಿಕ್ಷಕ ಮಹಾಗುಂಡಪ್ಪ ಕೋಟಿ, ಪ್ರಭು ಎಂ.ಎಲ್, ಶಂಕರ ಹೂಗಾರ, ಲಕ್ಷ್ಮಣ ಬದಾಮಿ, ಸ್ಥಳೀಯ ಕಲಾವಿದರಾದ ಮಲ್ಲು ಪೂಜಾರ, ಪವಿತ್ರಾ ಜಕ್ಕಪ್ಪನವರ, ಪಾಟೀಲ(ಯಂಡಿಗೇರಿ) ಹಾಗೂ ಕಟಗೇರಿ, ಯಂಡಿಗೇರಿಯ ಹಲವಾರು ಜಾನಪದ ಕಲಾವಿದರು ಪಾಲ್ಗೊಂಡಿದ್ದರು.