ಶೆರಿಭೀಕನಳ್ಖಿ ತಾಂಡಾಗೆ ಜಿಲ್ಲಾಧಿಕಾರಿ ಭೇಟಿ, ತಾಂಡಾ ನಿವಾಸಿಗಳ ಕುಂದುಕೊರತೆ ಆಲಿಕೆ

ಕಲಬುರಗಿ,ಮೇ.12: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಶುಕ್ರವಾರ ಸಂಜೆ ಚಿಂಚೋಳಿ ವನ್ಯಜೀವಿ ಅಭಯಾರಣ್ಯ ವಲಯದ ಬ್ಲಾಕ್-2 ಕಾಯ್ದಿರಿಸಿದ ಅರಣ್ಯ ಪ್ರದೇಶದಲ್ಲಿರುವ ಶೆರಿಬೀಕನಳ್ಳಿ ತಾಂಡಾಗೆ ಭೇಟಿ ನೀಡಿ ಅರಣ್ಯ ನಿವಾಸಿಗಳೊಂದಿಗೆ ಚರ್ಚೆ ನಡೆಸಿದ ಅವರು, ತಾಂಡಾ ನಿವಾಸಿಗಳ ಸಮಸ್ಯೆ ಆಲಿಸಿದರು.

ತಾಂಡಾದ ಗ್ರಾಮಸ್ಥರು ತಮ್ಮ ವಿವಿಧ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳ ಬಳಿ ಅಳಲು ತೋಡಿಕೊಂಡರು. ಸುತ್ತ ಅರಣ್ಯ ನಡುವೆ ತಾವು ವಾಸಿಸುತ್ತಿರುವುದರಿಂದ ದೈನಂದಿನವಾಗಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಹಂಚಿಕೊಂಡರು.

ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳು, ದಟ್ಟ ಅರಣ್ಯ ಕಾಡಿನ ನಡುವೆ ಇರುವ ಶೆರಿಭೀಕನಳ್ಳಿ ತಾಂಡಾಗೆ ಚಂದ್ರಮಪಳ್ಳಿ ಜಲಾಶಯದಿಂದ ಪೆಟ್ರೋಲಿಂಗ್ ಬೋಟ್ ಪಾತ್ ವೀಕ್ಷಿಸಿದಲ್ಲದೆ ಅಧಿಕಾರಿಗಳೊಂದಿಗೆ ಚಂದ್ರಂಪಳ್ಳಿ ಜಲಾಶಯದಲ್ಲಿ ಬೋಟಿಂಗ್ ಮಾಡಿ ಅಲ್ಲಿನ ಪರಿಸರ ಸಹ ವೀಕ್ಷಿಣೆ ಮಾಡಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ,ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ಅರಣ್ಯ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.