ಶೆಫಾಲಿ ಶಾ ಅಕ್ಷಯ್ ಕುಮಾರ್ ಅವರ ತಾಯಿಯಾಗಿ ನಟಿಸಿದ ನಂತರ ಚಲನಚಿತ್ರಗಳನ್ನು ಬಿಡಲು ಮನಸ್ಸು ಮಾಡಿದ್ದು ಯಾಕೆ?

ಎರಡು ದಶಕಗಳಿಗೂ ಹೆಚ್ಚು ಕಾಲ ಕಲಾವಿದೆಯಾಗಿ ಬಾಲಿವುಡ್ ಇಂಡಸ್ಟ್ರಿಯಲ್ಲಿ ತನ್ನ ಪಯಣವನ್ನು ಮಾಡಿರುವ ಶೆಫಾಲಿ ಶಾ ಆಗಾಗ ತನಗೆ ಸಂಬಂಧಿಸಿದ ಸಣ್ಣ ಮತ್ತು ದೊಡ್ಡ ಅನುಭವಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಈವಾಗ ಸಿನಿಮಾದಲ್ಲಿ ಮಹಿಳೆಯರಿಗೆ ಸಿಗುವ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ.
ವಾಸ್ತವವಾಗಿ, ಶೆಫಾಲಿ ಶಾ ಚಲನಚಿತ್ರಗಳಲ್ಲಿ ತನ್ನ ನಟನಾ ಪ್ರತಿಭೆಯನ್ನು ತೋರಿಸುವುದರ ಜೊತೆಗೆ ಆತಿಥ್ಯ ವ್ಯವಹಾರಕ್ಕೆ ಕಾಲಿಡುವ ಮೂಲಕ ತನ್ನ ಹೊಸ ಪ್ರಯಾಣವನ್ನು ಪ್ರಾರಂಭಿಸಿದ್ದಾರೆ. ಇತ್ತೀಚೆಗಷ್ಟೇ ಅದಕ್ಕೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಈ ಸಂದರ್ಭದಲ್ಲಿ, ಅವರು ಪುರುಷ ಮತ್ತು ಮಹಿಳೆಯರ ನಡುವಿನ ವಯಸ್ಸಿನ ತಾರತಮ್ಯವನ್ನು ಸಹ ಪ್ರಸ್ತಾಪಿಸಿದರು.
ಫಿಲ್ಮ್ ರಂಗದಲ್ಲಿ ಪಾತ್ರಗಳು ಬಂದಾಗ ಪುರುಷ ನಟರಿಗೆ ಕಿರಿಯ ಪಾತ್ರಗಳನ್ನು ನೀಡಲಾಗುತ್ತದೆ, ಆದರೆ ನಿರ್ದಿಷ್ಟ ವಯಸ್ಸಿನ ನಂತರ ನಟಿಯರಿಗೆ ಕೇವಲ ತಾಯಿ ಮತ್ತು ಚಿಕ್ಕಮ್ಮನ ಪಾತ್ರಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದರೊಂದಿಗೆ ಸಮಯ್ ಫಿಲ್ಮ್ ನಲ್ಲಿ ೨೮ನೇ ವಯಸ್ಸಿನಲ್ಲಿ ಅಕ್ಷಯ್ ಕುಮಾರ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದಾಗ ತನಗೆ ಸಂಬಂಧಿಸಿದ ಒಂದು ಅನುಭವವನ್ನು ಅವರು ಹೇಳಿದ್ದರು.
ಅಕ್ಷಯ್ ಅವರಿಗಿಂತ ವಯಸ್ಸಿನಲ್ಲಿ ದೊಡ್ಡವರಿದ್ದಾಗ- ಶೆಫಾಲಿ ಪ್ರಕಾರ, ಈ ಫಿಲ್ಮ್ ನ ನಂತರ, ಅವರು ಮಾಡಲು ಬಯಸದಂತಹ ಪಾತ್ರಗಳನ್ನೇ ಪಡೆಯುತ್ತಿದ್ದರಂತೆ.
ಹಾಗಾಗಿ ಸಿನಿಮಾ ಬಿಡುವ ಮನಸ್ಸು ಮಾಡಿದ್ದರು. “ಬಯಸಿದ ಪಾತ್ರಗಳು ಸಿಗದಿದ್ದರೆ ಕೆಲಸ ಮಾಡುವುದಿಲ್ಲ, ಮನೆಯಲ್ಲೇ ಕೂರುತ್ತೇನೆ”ಎಂದಿದ್ದರು. ಈ ಹಿಂದೆ ಅಮಿತಾಭ್ ಬಚ್ಚನ್ ಅವರ ಪತ್ನಿಯ ಪಾತ್ರದಲ್ಲಿಯೂ ಶೆಫಾಲಿ ಶಾ ಕಾಣಿಸಿಕೊಂಡಿದ್ದಾರೆ .ಶೆಫಾಲಿ ಇನ್ನೂ ಚಲನಚಿತ್ರಗಳಲ್ಲಿ ಸಕ್ರಿಯರಿದ್ದಾರೆ.

ಅಪಘಾತದ ನಂತರ, ಅರ್ಶಿ ಖಾನ್ ತನ್ನ ಅಗ್ನಿಪರೀಕ್ಷೆಯನ್ನು ವಿವರಿಸಿದರು, ” ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ.”

ಮಾಜಿ ಬಿಗ್ ಬಾಸ್ ಸ್ಪರ್ಧಿ ಅರ್ಶಿ ಖಾನ್ ಅವರು ತಮ್ಮ ಮುಂಬರುವ ಪ್ರಾಜೆಕ್ಟ್‌ನ ಶೂಟಿಂಗ್ ಗೆ ತೆರಳುವಾಗ ದೆಹಲಿಯಲ್ಲಿ ಕಾರು ಅಪಘಾತವನ್ನು ಮೊನ್ನೆ ಎದುರಿಸಿದರು.
ನವೆಂಬರ್ ೨೨ ರಂದು ಈ ಘಟನೆ ನಡೆದಿದ್ದು, ನಟಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು.
ತನ್ನ ಅಪಘಾತದ ನಂತರ, ಅರ್ಶಿ ಖಾನ್ ಸಂದರ್ಶನದ ಮೂಲಕ ತನ್ನ ಆರೋಗ್ಯದ ಬಗ್ಗೆ ಪ್ರಮುಖವಾದ ವಿವರಣೆಯನ್ನು ನೀಡಿದ್ದಾರೆ.


ರಾಜಧಾನಿ ದೆಹಲಿಯ ಮಾಳವೀಯಾ ನಗರದಲ್ಲಿ ಸೋಮವಾರ ಬಿಗ್ ಬಾಸ್ ಖ್ಯಾತಿಯ ಅರ್ಶಿ ಖಾನ್ ಅಪಘಾತಕ್ಕೀಡಾಗಿದ್ದರು. ಆದರೆ, ಈ ಕಾರು ಅಪಘಾತದಲ್ಲಿ ಅರ್ಶಿಗೆ ಹೆಚ್ಚಿನ ಗಾಯವಾಗದ ಕಾರಣ ಆಕೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೂ ಈ ಅಪಘಾತದ ನಂತರ ಅವರನ್ನು ದೆಹಲಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೊತೆಗೆ ಎದೆನೋವು ಕಾಣಿಸಿಕೊಂಡು ಮತ್ತೆ ಒಂದು ದಿನ ಆಸ್ಪತ್ರೆಗೆ ದಾಖಲಾಗಬೇಕಾಯಿತು.
ಅದೇ ಸಮಯದಲ್ಲಿ, ಅವರ ಅಪಘಾತದ ನಂತರ, ಅವರು ಸಂದರ್ಶನದ ಮೂಲಕ ತಮ್ಮ ಆರೋಗ್ಯದ ಬಗ್ಗೆ ಅಗತ್ಯ ಮಾಹಿತಿಗಳನ್ನು ನೀಡಿದ್ದಾರೆ.ಹಾಗೂ ಅವರು ದೇವರಿಗೆ ಧನ್ಯವಾದ ಹೇಳಿದರು.
ಮೊನ್ನೆ ಅವರು ಕಾರಿನಲ್ಲಿ ಶೂಟಿಂಗ್ ಗೆ ಹೋಗುತ್ತಿದ್ದರು. ದಾರಿಯಲ್ಲಿ ಅವರನ್ನು ಕಂಡು ಅಭಿಮಾನಿಗಳು ಅವರನ್ನು ಭೇಟಿಯಾಗಲು ಬಯಸಿದರು, ಕೆಲವು ಅಭಿಮಾನಿಗಳನ್ನು ಅರ್ಶಿ ಕೂಡಾ ನೋಡಿದರು.
ನೋಡಿದ ನಂತರ ಆರ್ಶಿ ಚಾಲಕನಿಗೆ ಕಾರನ್ನು ಸ್ವಲ್ಪ ನಿಧಾನಗೊಳಿಸುವಂತೆ ಕೇಳಿಕೊಂಡರು. ಆದರೆ, ಆಗ ಹಿಂದಿನಿಂದ ಬಂದ ಒಂದು ಕಾರು ಅವರ ಕಾರಿಗೆ ಡಿಕ್ಕಿ ಹೊಡೆಯಿತು.. ಈ ಡಿಕ್ಕಿಯಿಂದಾಗಿ ಕಾರಿನ ಮುಂಭಾಗದ ಗಾಜು ಸಂಪೂರ್ಣ ಒಡೆದಿದೆ. ಈ ವೇಳೆ ಆತನಿಗೂ ತನಗೂ ತಲೆಗೆ ಪೆಟ್ಟಾಗಿತ್ತು.ಇಬ್ಬರೂ ಕಾರಿನಿಂದ ಇಳಿಯಲು ಪ್ರಯತ್ನಿಸಿದರು.ಅಲ್ಲಿದ್ದ ಜನರು ಅವರ ಸ್ಥಿತಿಯನ್ನು ವಿಚಾರಿಸಲು ಕಾರಿನ ಕಡೆಗೆ ಓಡಿ ಬಂದರು ಎಂದು ಆರ್ಶಿ ಹೇಳಿದರು. ಆದರೆ ಆಕೆ ಆ ಸಮಯ ಪ್ರಜ್ಞೆ ತಪ್ಪುವ ಹಂತಕ್ಕೆ ಬಂದಿದ್ದರಂತೆ.