ಶೆಫಡ್ರ್ಸ್ ಇಂಡಿಯಾ ಇಂಟರ್‍ನ್ಯಾಶನಲ್‍ನ ಅ.ಭಾ ರಾಷ್ಟ್ರೀಯ ಸಮಾವೇಶ


ಹುಬ್ಬಳ್ಳಿ,ಸೆ.5: ಶೇಫಡ್ರ್ಸ್ ಇಂಡಿಯಾ ಇಂಟರ್ ನ್ಯಾಶನಲ್ ವತಿಯಿಂದ ಅಖಿಲ ಭಾರತ ರಾಷ್ಟ್ರೀಯ ಬೃಹತ್ ಸಮಾವೇಶ ಅಕ್ಟೋಬರ್ 2, 3 ರಂದು ಬೆಳಗಾವಿಯಲ್ಲಿ ನಡೆಯಲಿದೆ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಾದ್ಯಂತ ಕುರುಬ ಸಮಾಜದ 12 ಕೋಟಿ ಜನಸಂಖ್ಯೆ ಇದ್ದರೂ ಸಹ ಸಮಾಜದ ರಾಜಕೀಯ, ಶೈಕ್ಷಣಿಕ ಹಾಗೂ ವಿವಿಧ ಕ್ಷೇತ್ರದಲ್ಲಿ ಹಿಂದೆ ಇರುವುದು ದುರದೃಷ್ಟ ಸಂಗತಿಯಾಗಿದೆ ಎಂದರು.
ದೇಶದಲ್ಲಿ ಸಮಾಜ ಬಲಿಷ್ಠಗೊಳಿಸುವ ಉದ್ದೇಶದಿಂದ ಸಮಾವೇಶ ಏರ್ಪಡಿಸಲಾಗಿದ್ದು ಅಕ್ಟೋಬರ 3 ರಂದು ಸಮಾಜದಿಂದ ಎರಡು ಬಾರಿ ಆಯ್ಕೆಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಸಮಾವೇಶಕ್ಕೆ ಹರಿಯಾಣ, ಮಹಾರಾಷ್ಟ್ರ, ಗೋವಾ, ತಮಿಳ್ನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ವಿವಿಧ ರಾಜ್ಯಗಳ ರಾಜಕಾರಣಿಗಳು ಭಾಗವಹಿಸಲಿದ್ದಾರೆ. ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟ, ವಿಜಯಪುರ ಧಾರವಾಡಗಳಿಂದ ಸುಮಾರು 1 ಲಕ್ಷ ಸಮಾಜದ ಜನರು ಸೇರುವ ನಿರೀಕ್ಷೆ ಇದೆ. ರಾಜ್ಯಾದ್ಯಾಂತ ಸಭೆಗಳ ನಡೆಸಿ ಜಾಗೃತಿ ಸಹ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಾಗೂ ಶೇಫಡ್ರ್ಸ ಇಂಡಿಯಾ ಇಂಟರ್ ನ್ಯಾಶನಲ್ ರಾಷ್ಟ್ರೀಯ ಅಧ್ಯಕ್ಷ ಹೆಚ್. ವಿಶ್ವನಾಥ ಮಾತನಾಡಿ ರಾಜಕೀಯವಾಗಿ ಸಮಾಜವು ಬೆಳೆದಾಗ ನಾವು ಬೆಳೆಯಲು ಸಾಧ್ಯ ಎಂದರು.
ಸಮಾಜದ ಮುಖಂಡರಾದ ಲೋಹಿತ್ ನಾಯ್ಕರ, ನಾಗರಾಜ ಗುರಿಕಾರ, ಯೋಗಪ್ಪ ದಾಯಗೋಡಿ ಸಿದ್ದು ತೇಜಿ ಉಪಸ್ಥಿತರಿದ್ದರು.