
ಬೀದರ್: ಮಾ.19: ಜಿಲ್ಲೆಯ ಹಲವೆಡೆ ಸುರಿದ ಮಳೆ ಅನಾಹುತಗಳನ್ನು ಸೃಷ್ಟಿಸಿದೆ. ಭಾಲ್ಕಿ ತಾಲೂಕಿನ ಕೂಡ್ಲಿ ಗ್ರಾಮದಲ್ಲಿ ಮಳೆಗೆ 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಗಾಳಿ, ಮಳೆಗೆ ಶೆಡ್? ಕುಸಿದು ಬಿದ್ದು ಕೋಳಿಗಳ ಮಾರಣಹೋಮವಾಗಿದೆ.
ಮಾರ್ಚ್ 17ರ ರಾತ್ರಿ ಸುರಿದ ಮಳೆಯಿಂದಾಗಿ ಮದನರಾವ್ ಪಾಟೀಲ್ ಎಂಬುವವರಿಗೆ ಸೇರಿದ ಕೋಳಿ ಫಾರಂನಲ್ಲಿ ಶೆಡ್? ಕುಸಿದು ಬಿದ್ದು 8,000ಕ್ಕೂ ಹೆಚ್ಚು ಕೋಳಿಗಳು ಮೃತಪಟ್ಟಿವೆ. ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ಮದನರಾವ್ ಕಂಗಾಲಾಗಿದ್ದಾರೆ. ಇನ್ನು ಭಾಲ್ಕಿ ತಾಲೂಕಿನಲ್ಲೇ ಅಪಾರ ಪ್ರಮಾಣದ ಬೆಳೆ ಹಾನಿ, ಮನೆಗಳು ಕುಸಿದಿವೆ. ಕೂಡ್ಲಿ, ನಾಗರಾಳ, ನಿಟ್ಟೂರು ಗ್ರಾಮದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ಭಾರಿ ಗಾಳಿ, ಮಳೆಗೆ ಬೃಹತ್ ಗಾತ್ರದ ಮರಗಳು ಧರೆಗುರಳಿದೆ.