ಶೆಡ್‌ಗಳ ನಿರ್ಮಾಣಕ್ಕೆ ಸ್ಲಂ ಕ್ರಿಯಾ ವೇದಿಕೆ ಆಗ್ರಹ

ರಾಯಚೂರು, ನ, ೨೩- ಪಿಎಂಎವೈ ಯೋಜನೆಯಡಿ ಮನೆಗಳು ಮಂಜೂರಿಯಾದ ರಾಜೀವ್ ನಗರಕ್ಕೆ ತಾತ್ಕಾಲಿಕ
ಶೆಡ್‌ಗಳನ್ನು ನಿರ್ಮಿಸಿ ಮೂಲಭೂತ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ಸ್ಲಂ ಕ್ರಿಯಾ ವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ನಗರದ ಸಿಯಾತಲಾಬ್ ಸ್ಲಂ ರಾಜೀವ್ ನಗರ ಜಿ ೧ ನಿವಾಸಿಗಳಿಗೆ ಪಿಎಂಎವೈ ಯೋಜನೆಯಲ್ಲಿ ಮಂಜೂರಿಯಾಗಿ ತಿಂಗಳು ಕಳೆದರು ಇದುವರೆಗೂ ಮನೆಗಳ ಕಾಮಗಾರಿ ಪ್ರಾರಂಭಿಸದೆ ಅಧಿಕಾರಿಗಳು ಮತ್ತು ಗುತ್ತೇದಾರರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಹಳೆ ಮನೆಗಳು ಬಿದ್ದು ಒಂದು ಮಗು ಮೃತಪಟ್ಟಿದೆ ಆದರೂ ಜಿಲ್ಲಾಡಳಿತ ಸ್ಲಂ ಬೋರ್ಡ್ ಎಚ್ಚೆತ್ತುಕೊಳ್ಳದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಕೆಲವು ಮಾಡಿದ್ದಾರೆ. ಉಳಿದ ಮನೆಗಳಲ್ಲಿ ವಾಸಿಸುವವರಿಗೆ ಶೆಡ್‌ಗಳನ್ನು ನಿರ್ಮಿಸದೆ ಇರುವುದರಿಂದ ಹಳೆಮನೆಗಳಲ್ಲಿ ವಾಸಿಸುವುದರಿಂದ ಆ ಮನೆಗಳು ಸಂಪೂರ್ಣ ಕುಸಿದು ಬೀಳುವ ಸಂಭವವಿದೆ. ಇದಕ್ಕೆಲ್ಲ ಜಿಲ್ಲಾಡಳಿತ, ನಗರಸಭೆ, ಸ್ಲಂ ಬೋರ್ಡ್ ಅಧಿಕಾರಿಗಳು ನೇರ ಹೊಣೆಯಾಗುತ್ತದೆ. ಸದರಿ ವಿಷಯದ ಬಗ್ಗೆ ರಾಜೀವ್ ನಗರ ಸ್ಲಂ ನಿವಾಸಿಗಳು ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಎಚ್ಚೆತ್ತುಕೊಂಡು ಕೆಲಸ ಪ್ರಾರಂಭಿಸದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಆರೋಪಿಸಿದರು.
ಎರಡು ದಿನಗಳ ಒಳಗಡೆ ಬಾಕಿ ಕುಟುಂಬಗಳಿಗೆ ತಾತ್ಕಾಲಿಕ ಶೆಡ್ ನಿರ್ಮಿಸದೆ ಹೋದಲ್ಲಿ ಜಿಲ್ಲಾಡಳಿತದ ಮುಂದೆ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಆರ್.ಬೇರಿ, ನರಸಿಂಹಲು ಸೇರಿದಂತೆ ಉಪಸ್ಥಿತರಿದ್ದರು.