ಬೀದರ,ಏ 17:ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ್ ಅವರು, ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯದ ಕೋಟ್ಯಾಂತರ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ.ಕಾರ್ಯಕರ್ತರ ಶಾಪ ಜಗದೀಶ ಶೆಟ್ಟರವರಿಗೆ ತಟ್ಟಲಿದೆ ಎಂದು ಕೇಂದ್ರ ನೂತನ ಹಾಗೂ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಸಾಯನಿಕ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದ್ದಾರೆ.
ಜಗದೀಶ ಶೆಟ್ಟರ್ ಅವರಿಗೆ ಕಳೆದ 4 ದಶಕಗಳಿಂದ,ಪಕ್ಷದ ಕಾರ್ಯಕರ್ತರು ಅವರಿಗೆ ಪಕ್ಷದಲ್ಲಿ ರಾಜ್ಯದ ಎಲ್ಲ ಉನ್ನತಸ್ಥಾನಗಳು ನೀಡಿದ್ದಾರೆ, ಸರ್ಕಾರದಲ್ಲಿಯೂ ರಾಜ್ಯದ ಉನ್ನತ ಸ್ಥಾನನೀಡಿರುವ ಕಾರ್ಯಕರ್ತರನ್ನು ದ್ರೋಹ ಮಾಡಿ ಪಕ್ಷಕ್ಕೆ ರಾಜೀನಾಮೆಕೊಟ್ಟು, ಸ್ವಾರ್ಥದ ರಾಜಕಾರಣಕ್ಕೆ ಜಗದೀಶ ಶೆಟ್ಟರವರು ಸಾಕ್ಷಿಯಾಗಿದ್ದಾರೆ.ಇಂದು ಬಿಜೆಪಿ ವಿಶ್ವದ ಅತಿದೊಡ್ಡ ಪಕ್ಷವಾಗುವುದಕ್ಕೆ ಕಾರಣ ಭಾರತೀಯ ಜನತಾ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ,ಕೋಟಿಗಟ್ಟಲೆ ಕಾರ್ಯಕರ್ತರು, ಅವರ ಜೀವನ, ಕುಟುಂಬ, ಬಿಟ್ಟು ನಮ್ಮ ಪಕ್ಷ ಕಟ್ಟಿದ್ದಾರೆ, ನಮ್ಮ ಕಾರ್ಯಕರ್ತನಿಗೆ ದೇಶ
ಮೊದಲು, ನಂತರ ಪಕ್ಷ, ತದನಂತರ ನಾನು ಎನ್ನುವ ಸಿದ್ದಾಂತವಾಗಿದೆ.
ಕಳೆದ 4 ದಶಕಗಳ ಕಾಲ ಜಗದೀಶ ಶೇಟ್ಟರರವರು ಸಹ ಈ
ಸಿದ್ದಾಂತವನ್ನು ಒಪ್ಪಿಕೊಂಡು ಸಂಪೂರ್ಣವಾದ ಅಧಿಕಾರವನ್ನು
ಅನುಭವಿಸಿದ್ದಾರೆ, ಆದರೆ ಇಂದು ಪಕ್ಷದ ವರಿಷ್ಠರು ಯುವ
ಪಿಳೀಗೆಗೆ ಅವಕಾಶ ನೀಡಬೇಕಾಗಿದೆ, ತಾವುಗಳು ರಾಜ್ಯದ
ಮುಖ್ಯಮಂತ್ರಿಯಾಗಿ, ನಾಲ್ಕೈದು ಬಾರಿ ಶಾಸಕರಾಗಿ ಸೇವೆ ಮಾಡಿದ್ದಿರಿ,
ಇವಾಗ ನೀವು ದೇಶ ಸೇವೆಗೆ ಬನ್ನಿ ಎನ್ನುವ ವರಿಷ್ಠದ ಅಹ್ವಾನವನ್ನು
ತಿರಸ್ಕರಿಸಿ, ಕೇವಲ ನಾನು ಒಂದು ಶಾಸಕನಾಗಿ ಇರಬೇಕು ಎನ್ನುವ
ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ.ಎಂದು ಸಚಿವರು
ಶೆಟ್ಟರ ವಿರುದ್ಧ ವಾಗ್ದಾಳಿ ನಡೆಸಿದರು.
ಮೊದಲಿನ ಬಿಜೆಪಿ ಇಂದಿಲ್ಲ ಎಂದು ನೀವು ಹೇಳುತ್ತಿದ್ದಿರಿ,
ಯುವಕರಿಗೆ ಅವಕಾಶ ಮಾಡಿಕೊಡಿ, ದೇಶ ಸೇವೆಗೆ ಬನ್ನಿ ಎಂದರೆ ಬಿಜೆಪಿ
ಸರಿಯಾಗಿಲ್ಲ್ಲ ಎಂದು ಹೇಳುವ ನಿಮ್ಮ ಹೇಳಿಕೆ ಖಂಡನೀಯ ಎಂದರು.
ಲಕ್ಷ್ಮಣ ಸವದಿ ಹಾಗೂ ಜಗದೀಶ ಶೆಟ್ಟರರವರು,ಮಾಧ್ಯಮಗಳಲ್ಲಿ ಬಿಜೆಪಿಯು ಲಿಂಗಾಯತರನ್ನುಕಡೆಗಣಿಸುತ್ತಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾದ ಮಾತು.ಈ ಬಾರಿ ಪಕ್ಷದಲ್ಲಿ ಹೊಸ ಮುಖಗಳಿಗೆ, ಹಾಗೂ ಹೆಚ್ಚಿನ ಸಂಖ್ಯೆಯಲ್ಲಿಲಿಂಗಾಯತರಿಗೆ ಅವಕಾಶ ಮಾಡಿಕೊಟ್ಟಿದೆ.
ಕಾಂಗ್ರೇಸ್ ಪಕ್ಷ ಹಿಂದೊಮ್ಮೆ ವೀರೇಂದ್ರ ಪಾಟೀಲ್‍ರವರಿಗೆ ನಡೆಸಿಕೊಂಡಿತ್ತು, ಈ ವಿಷಯವನ್ನು ಜಗದೀಶಶೆಟ್ಟರ ಹಾಗೂ ಲಕ್ಷ್ಮಣ ಸವದಿ ಮರೆತಿದ್ದಾರೆ ಎಂದೆನಿಸುತ್ತದೆ ಹಾಗೂಇವರುಗಳ ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಹೆಚ್ಚಿನ ಮತ ಹಾಕಿಸಿ, ಎರಡು ಕ್ಷೇತ್ರದಲ್ಲಿ ನಮ್ಮಅಭ್ಯರ್ಥಿಗಳಿಗೆ ಗೆಲ್ಲಿಸಿಕೊಂಡು ಬರುತ್ತಾರೆ ಎಂದು ವಿಶ್ವಾಸ
ವ್ಯಕ್ತಪಡಿಸಿದ್ದಾರೆ.ಲಿಂಗಾಯತರನ್ನು ಕಡೆಗಣಿಸಿದ್ದಾರೆ ಎನ್ನುವ ಆರೋಪದಲ್ಲಿ
ಹುರಳಿಲ್ಲ, ಬಿಜೆಪಿ ಪಕ್ಷವು ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು