ಶೆಂಗಾ ಚಟ್ನಿ

ಬೇಕಾಗುವ ಪದಾರ್ಥಗಳು
ಅರ್ಧ ಕಪ್ ಶೇಂಗಾ ಅಥವಾ ಕಡ್ಲೆಕಾಯಿ
೨-೪ ಒಣಮೆಣಸಿನಕಾಯಿ
೩-೪ ಬೇಳೆ ಬೆಳ್ಳುಳ್ಳಿ
೩-೪ ಕರಿಬೇವಿನ ಎಲೆ
ಕಾಲು ಕಪ್ ತೆಂಗಿನ ತುರಿ
ಸಣ್ಣ ಗೋಲಿ ಗಾತ್ರದ ಹುಣಿಸೆಹಣ್ಣು
ಉಪ್ಪು ರುಚಿಗೆ ತಕ್ಕಷ್ಟು
೧ ಟೀ ಸ್ಪೂನ್ ಅಡುಗೆ ಎಣ್ಣೆ
ಒಗ್ಗರಣೆಗೆ ಬೇಕಾಗುವ ಪದಾರ್ಥಗಳು:
ಅರ್ಧಟೀ ಸ್ಪೂನ್ ಸಾಸಿವೆ
೧ ಒಣ ಮೆಣಸಿನಕಾಯಿ ಅಥವಾ ಹಸಿ ಮೆಣಸಿನಕಾಯಿ
-೪ ಕರಿಬೇವಿನ ಎಲೆ
೨ ಟೀ ಸ್ಪೂನ್ ಅಡುಗೆ ಎಣ್ಣೆ
ಶೇಂಗಾ ಚಟ್ನಿ ಮಾಡುವ ವಿಧಾನ:
ಬಾಣಲೆಯಲ್ಲಿ ಒಂದು ಚಮಚ ಎಣ್ಣೆ ಬಿಸಿ ಮಾಡಿ, ಅರ್ಧ ಕಪ್ ಶೇಂಗಾ ಅಥವಾ ನೆಲಗಡಲೆ ಹಾಕಿ ಮಧ್ಯಮ ಉರಿಯಲ್ಲಿ ಹುರಿಯಿರಿ. ನೆಲಗಡಲೆ ಕಂದು ಬಣ್ಣಕ್ಕೆ ತಿರುಗಿ, ಗರಿ-ಗರಿಯಾದಾಗ ಒಣಮೆಣಸು ಮತ್ತು ಸಿಪ್ಪೆ ತೆಗೆದು ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಒಂದೆರಡು ನಿಮಿಷ ಹುರಿಯಿರಿ. ಕೊನೆಯಲ್ಲಿ ಕರಿಬೇವು ಮತ್ತು ತೆಂಗಿನ ತುರಿ ಹಾಕಿ, ಮಗುಚಿ ಸ್ಟವ್ ಆಫ್ ಮಾಡಿ. ಉಪ್ಪು, ಹುಣಿಸೇಹಣ್ಣು ಮತ್ತು ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣನೆ ಅರೆಯಿರಿ.
ಅದನ್ನು ಒಂದು ಬಟ್ಟಲಿಗೆ ಹಾಕಿ. ಈ ಚಟ್ನಿ ಸ್ವಲ್ಪ ತೆಳ್ಳಗಿರಬೇಕು. ಅಗತ್ಯವಿದ್ದಷ್ಟು ನೀರು ಸೇರಿಸಿ. ಎಣ್ಣೆ, ಸಾಸಿವೆ, ಒಣಮೆಣಸು ಮತ್ತು ಕರಿಬೇವಿನ ಒಗ್ಗರಣೆ ಕೊಡಿ. ಇಡ್ಲಿ ಅಥವಾ ದೋಸೆಯೊಂದಿಗೆ ಬಡಿಸಿ