ಶೃದ್ಧಾ ದೇಶಪಾಂಡೆಯವರಿಗೆ ಡಾಕ್ಟರೇಟ ಪದವಿ

ಬೀದರ :ಮಾ.14: ನಗರದ ಪ್ರತಿಷ್ಠಿತ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ ಇಂಗ್ಲೀಷ ಭಾಷೆಯ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೃದ್ಧಾ ದೇಶಪಾಂಡಯವರು ಇಂಗ್ಲೀಷ ಭಾಷೆಯಲ್ಲಿ ಎಂದರೆ “ಇಂಡಿಯನ್ ಇಂಗ್ಲೀಷ್ ನಾವೆಲ್ಸನ ಬರ್ತ ಆ್ಯಂಡ ಡೆವಲೆಪಮೆಂಟ್” ಮಹಾ ಪ್ರಬಂಧ ಡಾ. ಅಶೋಕ ಅವರ ಮಾರ್ಗದರ್ಶನದಲ್ಲಿ ಮಂಡಿಸಿದಕ್ಕಾಗಿ ಓ.ಪಿ.ಜೆ.ಎಸ್. ಯುನಿರ್ಸಿಟಿಯು ಡಾಕ್ಟರೇಟ ಪದವಿ ನೀಡಿ ಗೌರವಸಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ತಿಳಿಸಿದರಲ್ಲದೆ ಮಹಾವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು ಗೌರವ ಸನ್ಮಾನ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಆಹಾರ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಸುರೇಖಾ, ಡಾ. ವಿನಿತಾ ಪಾಟೀಲ, ಪ್ರಾಂಶುಪಾಲರು ಲಿಂಗರಾಜ ಅಪ್ಪಾ ಇಂಜಿನಿಯುರಿಂಗ್ ಕಾಲೇಜು, ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆ, ಮಹಿಳಾ ಘಟಕದ ಸಂಯೋಜಕರಾದ ಶ್ರೀಮತಿ ಸುಜಾತಾ ಹಿಪ್ಪರಗಿ, ಡಾ. ಸುಮನ್ ಕೌರ್, ವಿದ್ಯಾರ್ಥಿನಿಯರು ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು ಎಂದು ಸಿಬ್ಬಂದಿ ಕಾರ್ಯಕದರ್ಶಿಗಳಾದ ಡಾ. ಮಲ್ಲಿಕಾರ್ಜುನ ಕೋಟೆ ತಿಳಿಸಿದರು.