ವಿಭಿನ್ನ ಧಾರಾವಾಹಿಗಳನ್ನು ನಿರ್ಮಾಣ ಮಾಡುವ ಮೂಲಕ ಹೊಸತನಕ್ಕೆ ನಾಂದಿ ಹಾಡಿರುವ ನಟಿ, ನಿರ್ಮಾಪಕಿ ಶೃತಿ ನಾಯ್ಡು, ಕನ್ನಡ ಕಿರುತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದರು. “ಪ್ರೀಮಿಯರ್ ಪದ್ಮಿನಿ” ಚಿತ್ರದ ಮೂಲಕ ಹಿರಿತೆರೆಯಲ್ಲಿಯೂ ಕಮಾಲ್ ಮಾಡಿದ ಶೃತಿ ನಾಯ್ಡು ಇದೀಗ ಮತ್ತೊಂದು ಚಿತ್ರದ ನಿರ್ಮಾಣ ಕೈಗೆತ್ತಿಕೊಂಡಿದ್ದಾರೆ.
ನಾಡದೇವತೆ ಚಾಮೇಂಡೇಶ್ವರಿ ಸನ್ನಧಿಯಲ್ಲಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ನೆರವೇರಿದೆ. “ಪ್ರೀಮಿಯರ್ ಪದ್ಮಿನಿ” ಚಿತ್ರ ನಿರ್ದೇಶನ ಮಾಡಿದ್ದ ರಮೇಶ್ ಇಂದಿರಾ ಅವರೇ ಹೊಸ ಚಿತ್ರಕ್ಕೂ ಆಕ್ಷನ್‍ಕಟ್ ಹೇಳುತ್ತಿದ್ದಾರೆ. ಶೃತಿ ನಾಯ್ಡು ನಿರ್ಮಾಣ ಮಾಡುತ್ತಿರುವ ಚಿತ್ರದಲ್ಲಿ ನಟ ಪ್ರಮೋದ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಶೃತಿ ನಾಯ್ಡು, ರಮೇಶ್ ಇಂದಿರಾ ಮತ್ತು ಪ್ರಮೋದ್ ಕಾಂಬಿನೇಷನ್‍ಲ್ಲಿ ಎರಡನೇ ಬಾರಿಗೆ ಮೂಡಿ ಬರುತ್ತಿರುವ ಚಿತ್ರ ಸಂಪೂರ್ಣ ಯುವಜನತೆಯನ್ನು ಆಧರಿಸಿ ಮಾಡುತ್ತಿರುವ ಚಿತ್ರ.
ಹೊಸ ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕಿ ಶೃತಿ ನಾಯ್ಡು, ಯೂಥ್ ಪುಲ್ ಚಿತ್ರ .ನಟ ಪ್ರಮೋದ್ ಆಕ್ಷನ್ ಹಿರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಕಾಲೇಜು ಸ್ಟೋರಿಯ ಕಥೆ ಚಿತ್ರದಲ್ಲಿದೆ. ಹೀಗಾಗಿ ಅಲ್ಲಿ ಪ್ರೇಮಕತೆ, ಪ್ರೀತಿ, ಸ್ನೇಹ, ಪೊಸೆಸೀವ್‍ನೆಸ್ ಸೇರಿದಂತೆ ಎಲ್ಲರಿಗೂ ಇಷ್ಟವಾಗುವ ಸಿನಿಮಾ ಚಿತ್ರದಲ್ಲಿರಲಿದೆ.
ಎಲ್ಲೆಲ್ಲಿ ಚಿತ್ರೀಕರಣ ಮಾಡಬೇಕು ಎನ್ನುವುದನ್ನು ಸದ್ಯದಲ್ಲಿಯೇ ನಿರ್ಧಾರ ಮಾಡುತ್ತೇವೆ. ಸದ್ಯ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಕ್ರಿಪ್ಟ್ ಪೂಜೆ ಆಗಿದೆ. ಒಟಿಟಿಯ ವೇಗದಲ್ಲಿ ಚಿತ್ರಮಂದಿರದಿಂದ ವಿಮುಖವಾಗಿರುವ ಮಂದಿಯನ್ನು ಚಿತ್ರಮಂದಿರದತ್ತ ಕರೆತರುವ ಕೆಲಸ ಮಾಡಲಾಗುತ್ತಿದೆ. ಎಲ್ಲರಿಗೂ ಇಷ್ಟವಾಗುವ ಸಿನಿಮಾ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.