ಶೃತಿಲಯ ಸಂಗೀತ ಶಾಲೆ ಆರಂಭ

ಕಲಬುರಗಿ,ಜು.26-ಶ್ರೀ ಗುರು ಪುಟ್ಟರಾಜೇಶ್ವರ ಕೃಪಾಪೆÇೀಷಿತ ಶೃತಿಲಯ ಸಂಗೀತ ಪಾಠ ಶಾಲೆ ಉದ್ಘಾಟನೆ ಸಮಾರಂಭ ನಗರದ ಖಾದ್ರಿ ಚೌಕ್ ಸಂತೋಷ್ ಕಾಲನಿ ಕ್ರಾಸ್‍ನ ಗಂಗಾ ಅಪಾರ್ಟ್ ಮೆಂಟ್ ಹತ್ತಿರ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ನವಕರ್ನಾಟಕ ಸಂಗೀತ ಪದವೀಧರರು ಸಂಘ ರಾಜ್ಯ ಅಧ್ಯಕ್ಷ ಬಂಡಯ್ಯ ಸ್ವಾಮಿ ಸುಂಟನೂರ ಅವರು ಮಾತನಾಡಿ, ಪ್ರಪಂಚದಲ್ಲಿರುವ ಎಲ್ಲಾ ಸಂಗೀತಗಳಿಂತ ಭಾರತೀಯ ಸಂಗೀತ ಪರಂಪರೆ ವಿಭಿನ್ನವಾಗಿದ್ದು, ಸಂಗೀತವನ್ನು ಕೇವಲ ಒಂದು ಸ್ಥಾನಕ್ಕೆ ಮಾತ್ರ ಸೀಮಿತಗೊಳಿಸಲಾಗುತ್ತಿದೆ. ಆದರೆ, ಭಾರತೀಯ ಸಂಗೀತ ಪರಂಪರೆಗೆ ಪೂಜನೀಯ ಸ್ಥಾನ ನೀಡಲಾಗಿದ್ದು, ಭಾರತೀಯ ಸಂಗೀತದಲ್ಲಿ ಭಕ್ತಿ ಮತ್ತು ಆಧ್ಯಾತ್ಮಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಅದರಲ್ಲೂ ಗದುಗಿನ ಡಾ.ಪಂ.ಪುಟ್ಟರಾಜ ಗವಾಯಿಗಳ ಶಿಷ್ಯರು ಸಂಗೀತ ಶಾಲೆ ಆರಂಭಿಸಿರುವುದು ಅತಿ ಸಂತಸದ ವಿಷಯವಾಗಿದೆ ಎಂದರು.
ಹಿರಿಯ ಕಲಾವಿದ ಅಣ್ಣರಾಯ ಮತ್ತಿಮೂಡ ಅವರು ಮಾತನಾಡಿ, ಇಂದಿನ ಮಕ್ಕಳಿಗೆ ಶಾಲಾ ಶಿಕ್ಷಣದ ಜೊತೆಗೆ ಸಂಗೀತ ಶಿಕ್ಷಣವು ಅಗತ್ಯವಾಗಿದೆ ಎಂದರು. ಸಂಗೀತ ಶಾಲೆಯ ಮುಖ್ಯಗುರು ಸಂತೋಷ ಕೋಡ್ಲಿ ಮತ್ತು ಆನಂದ ನಂದಿಕೋಲ, ಕಲಾವಿದರಾದ ತೋಟೇಂದ್ರ ಶಾಸ್ತ್ರೀ, ಹಿರಿಯರಾದ ರವಿಸ್ವಾಮಿ ಗೋಟುರ, ಚೇತನ ಬಿದಿಮನಿ, ಶಿವಾನಂದ ಪಾಟೀಲ್, ನಾಗು ನಿಂಗೋಜಿ, ಮೌನೇಶ ಪಾಂಚಾಳ, ಶರಣು ಹಾವನೋರ ಉಪಸ್ಥಿತರಿದ್ದರು. ವಿಶೇಷವಾಗಿ ಅಂಧ ಮಕ್ಕಳಿಗೆ ಉಚಿತವಾಗಿ ಸಂಗೀತ ಕಲಿಸಲಾಗುವುದು ಮಾಹಿತಿಗಾಗಿ 9353333934 ಸಂಪರ್ಕಿಸಿ.