ಶೃಂಗಾರಗೊಂಡ ಸಾರಿಗೆ ಬಸ್!

ಬಾದಾಮಿ, ಮಾ28: ತಾಲೂಕಿನ ನೀಲಗುಂದ ಗ್ರಾಮದಲ್ಲಿ ತಾಲೂಕಾ 8 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಬಾದಾಮಿ ಸಾರಿಗೆ ಇಲಾಖೆಯ ವತಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು.
ಬಾದಾಮಿಯಿಂದ ನೀಲಗುಂದ ಗ್ರಾಮಕ್ಕೆ ತೆರಳುವ ಬಸ್ ಮದುವನಗಿತ್ತಿಯಂತೆ ಶೃಂಗರಿಸಲಾಗಿತ್ತು. ಕನ್ನಡದ ಬಾವುಟಗಳನ್ನು ಕಟ್ಟಿ ಕನ್ನಡದ ಮಾಹಾ ಲೇಖಕರ ಭಾವಚಿತ್ರಗಳು ಬಸ್‍ನ ತುಂಬ ಮಲ್ಲಿಗೆ ಹಾಗೂ ಸೇವಂತಿಗೆ ಹೂವುಗಳಿಂದ ಅಲಂಕರಿಸಲಾಗಿತ್ತು.
ಬಸ್ ಚಾಲಕ ಎಮ್.ಬಿ. ತೋರಗಲ್ ಮತ್ತು ನಿರ್ವಾಹಕ ಎನ್.ಎಮ್. ಗಾಣಿಗೇರ ಗ್ರಾಮೀಣ ಭಾಗದ ವಸ್ತ್ರ(ಧೋತರ ನೇರುಶರ್ಟ್) ಧರಿಸಿ ತಲೆಗೆ ರೇಷ್ಮೆ ಪೇಟವನ್ನು ಧರಿಸಿ ನೋಡುಗರ ಕಣ್ಮನ ಸೆಳೆಯಿತು. ಬಸ್ ಚಲಿಸುವಾಗ ಕನ್ನಡದ ಹಾಡುಗಳನ್ನು ಧ್ವÀ್ವನಿವರ್ಧಕದ ಮೂಲಕ ದಾರಿಯಲ್ಲಿ ಚಲಿಸಿದರೆ ಎಲ್ಲರೂ ಬಸ್ ನತ್ತ ನೋಡುವಂತಾಗಿತ್ತು. ಕನ್ನಡದ ಮನಸ್ಸುಗಳು ಸಂತೋಷದಿಂದ ಚಾಲಕನಿಗೆ ಚಪ್ಪಾಳೆ ತಟ್ಟುವುದರ ಮೂಲಕ ನಮಸ್ಕರಿಸಿದರು. ನೀಲಗುಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಾಹಿತ್ಯ ಜಾತ್ರೆಗೆ ಎಲ್ಲರು ಆಗಮಿಸಿ ಸಾಹಿತ್ಯದ ರಥ ಎಳೆದರು.