ಶೃಂಗದಲ್ಲಿ ಭಾರತ ನಾಮಫಲಕ

(ಸಂಜೆವಾಣಿ ಪ್ರತಿನಿಧಿಯಿಂದ)
ನವದೆಹಲಿ,ಸೆ,೯:ಇಂಡಿಯಾ ಹೆಸರನ್ನು ಭಾರತ ಎಂದು ನಾಮಕರಣ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿರುವ ಬೆನ್ನಲ್ಲೆ ನವದೆಹಲಿಯಲ್ಲಿ ನಡೆದಿರುವ ಜಿ -೨೦ ಶೃಂಗಸಭೆಯಲ್ಲಿ ಇಂಡಿಯಾ ಬದಲು ಭಾರತ ನಾಮಫಲಕವನ್ನೇ ಬಳಸಲಾಗಿದೆ.
ಈ ಶೃಂಗಸಭೆಯಲ್ಲಿ ಆಸೀನರಾಗಿರುವ ಎಲ್ಲ ದೇಶಗಳ ಮುಖ್ಯಸ್ಥರ ಆಯಾ ದೇಶಗಳ ಹೆಸರಿನ ನಾಮಫಲಕ ಇಡಲಾಗಿದ್ದು, ಪ್ರಧಾನಿ ನರೇಂದ್ರಮೋದಿ ಅವರ ಮುಂದೆ ಭಾರತ ಎಂಬ ನಾಮಫಲಕ ಇಡಲಾಗಿದ್ದು, ಇಂಡಿಯಾ ಪದಕ್ಕೆ ತಿಲಾಂಜಲಿ ನೀಡಲಾಗಿದೆ.ಪ್ರಧಾನಿ ನರೇಂದಿ ಮೋದಿ ಅವರ ಮುಂದೆ ಭಾರತ ಎಂಬ ಫಲಕವಿರುವ ಚಿತ್ರ ಎಲ್ಲೆಡೆ ವೈರಲ್ ಆಗಿದೆ.ಪ್ರಧಾನಿ ಅವರು ಉದ್ಘಾmನಾ ಭಾಷಣ ಮಾಡಿದ ಸಂದರ್ಭದಲ್ಲೂ ಭಾರತ ಫಲಕ ಇರುವ ಚಿತ್ರಗಳು ವೈರಲ್ ಆಗಿದ್ದು, ಇನ್ನು ಮುಂದೆ ಇಂಡಿಯಾ ಬದಲು ಭಾರತವೇ ಎಲ್ಲೆಲ್ಲೂ ರಾರಾಜಿಸುವುದೇ ಎಂಬುದನ್ನು ಈ ನಾಮಫಲಕ ಸಂಕೇತಿಸಿದೆ.