ಶೂ ಒಳಗೆ ಅಡಗಿದ್ದ ಮೂರು ಅಡಿ ಉದ್ದದ ನಾಗರಹಾವು!

ಶಿವಮೊಗ್ಗ, ಆ. ೨: ಶಿವಮೊಗ್ಗ ನಗರದ ಹೊರವಲಯ ಬೊಮ್ಮನಕಟ್ಟೆ ಗ್ರಾಮದ ಸಮೀಪದ ಮನೆಯೊಂದರಲ್ಲಿ ಸುಮಾರು ೭ ಇಂಚು ಉದ್ದದ ಶೂ ಒಳಗೆ ೩ ಅಡಿ ಉದ್ದದ ನಾಗರಹಾವೊಂದು ಅಡಗಿ ಕುಳಿತ್ತಿದ್ದ ಘಟನೆ ನಡೆದಿದೆ.
ಹಾವನ್ನು ಗಮನಿಸಿದ ಕುಟುಂಬದವರು ಉರಗ ರಕ್ಷಕ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕಾಗಮಿಸಿದ ಕಿರಣ್ ಅವರು ಶೂ ಒಳಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸಂರಕ್ಷಿಸಿದ್ದಾರೆ.
ಮನೆಯ ಕಾಂಪೌಂಡ್ ಆವರಣದಲ್ಲಿ ಕಾಣಿಸಿಕೊಂಡ ಹಾವು, ಜನರನ್ನು ನೋಡಿ ಭಯಭೀತವಾಗಿ ಶೂ ಒಳಗಿ ಅವಿತುಕೊಂಡಿದೆ ಎಂದು ಕಿರಣ್ ತಿಳಿಸಿದ್ದಾರೆ.