ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ

ಮಸ್ಕಿ,ನ.11- ರೈತರ ಅನುಕೂಲಕ್ಕೆ ಶೂನ್ಯ ಬಟ್ಟಿ ದರದಲ್ಲಿ 3 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿ ದರದಲ್ಲಿ ಬೆಳೆ ಸಾಲ ನೀಡಲಾಗುತ್ತಿದೆ ರೈತರು ಸದುಪಯೋಗ ಪಡೆದು ಕೊಳ್ಳ ಬೇಕು ಎಂದು ಪಟ್ಟಣದ ಪ್ರಾಥಮಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಂಪಾಪತಿ ಹೂವಿನಬಾವಿ ಹೇಳಿದರು.
ಸಹಕಾರಿ ಕಚೇರಿ ಬಳಿ ನಡೆದ ಸಹಕಾರಿಯ ೪೪ ನೇ ವರ್ಷದ ಮಹಾ ಸಭೆಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು. ಸಾಲ ಮನ್ನಾ ಯೋಜನೆಯಲ್ಲಿ ಕಳೆದ ವರ್ಷ ಸಹಕಾರ ಸಂಘದ ೪೧೯ ಜನರೈತರ ಸಾಲ ಮನ್ನಾ ಲಾಭ ಪಡೆದು ಕೊಂಡಿದ್ದಾರೆ ಸಾಲ ಮನ್ನಾ ಯೋಜನೆ ರೈತರ ಆರ್ಥಿಕ ಸಂಕಷ್ಟ ನಿವಾರಿಸಿದೆ ಮುಂಬರುವ ದಿನಗಳಲ್ಲಿ ರೈತರ ಅನುಕೂಲಕ್ಕೆ ಹೊಸ ಯೋಜನೆ ಜಾರಿ ಗೊಳಿಸಲು ಚಿಂತನೆ ನಡೆದಿದೆ ಎಂದು ಅಧ್ಯಕ್ಷ ಪಂಪಾಪತಿ ಹೂವಿನಬಾವಿ ಹೇಳಿದರು.
ಆರ್ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶ್ರೀ ನಿವಾಸ ರಾಥೋಡ್ ಮಾತನಾಡಿ ರಾಜ್ಯದಲ್ಲಿ ಸಹಕಾರಿ ವ್ಯವಸ್ಥೆ ಬಲ ಗೊಂಡಿದೆ ಎಂದು ಹೇಳಿದರು ಪ್ರಾಥಮಿಕ ಕೃಷಿ ಸಹಕಾರ ಸಂಘದ ಸಿಇಒ ಬಿಜಿ. ನಾಯಕ ಮಾತನಾಡಿ ರೈತರಿಗೆ ಸಾಲ ನೀಡುವ ಜತೆಗೆ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ, ಸ್ವಸಹಾಯ ಗುಂಪಿನ ಮಹಿಳೆಯರಿಗೆ ಸಾಲ ನೀಡಲಾಗಿದೆ ಸಹಕಾರಿ ಸಂಘ ೭ ಲಕ್ಷ ರೂ ಲಾಭ ಗಳಿಸಿದೆ ಎಂದು ಹೇಳಿದರು ಪಂಪಾಪತಿ ಲೆಕ್ಕ ಪತ್ರ ವರದಿ ಮಂಡಿಸಿದರು.
ಸಹಕಾರಿ ಉಪಾಧ್ಯಕ್ಷ ದುರ್ಗಪ್ಪ ಗೋನ್ವಾರ, ನಿರ್ದೆಶಕರಾದ ಮಲ್ಲಯ್ಯ ಮಲ್ಕಾಪೂರ,ಬಸವರಾಜ ಮಿಟ್ಟಿಮನಿ, ಅಬ್ದುಲ್ ರಜಾಕ್, ದೇವಣ್ಣ ನಾಯಕ, ಲಿಂಗಪ್ಪ ನಾಗರ ಬೆಂಚಿ, ಅಡಿವೆಪ್ಪ, ಗ್ಯಾನಪ್ಪ ಕುರುಬರ, ಖಾದರಬೀ, ವಿಜಯ ಲಕ್ಷ್ಮೀ ಇದ್ದರು ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ವಾರ್ಷಿಕ ಸಭೆ ನಡೆಯಿತು ಅಂದಾನೇಶ ನಿರ್ವಹಿಸಿದರು. ಒತ್ತಾಯ ಃ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಉಜನಿ ಗ್ರಾಮದಲ್ಲಿ ಮಡಿವಾಳ ಸಮಾಜಕ್ಕೆ ಜಾತಿ ನಿಂದನೆ ಮಾಡಿದ ವ್ಯಕ್ತಿಯ ಮೇಲೆ ಕಾನೂನು ಕ್ರಮ ಜರುಗಿಸ ಬೇಕು ಮತ್ತು ಲಾಕ್ ಡೌನ್ ಸಂದಂರ್ಭದಲ್ಲಿ ಸರಕಾರ ಮಡಿವಾಳ ಸಮಾಜಕ್ಕೆ ಪ್ರಕಟಿಸಿದ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ಮಡಿವಾಳ ಸಮಾಜ ಹಿತ ರಕ್ಷಣಾ ವೇದಿಕೆ ಮುಖಂಡರು ಸರಕಾರಕ್ಕೆ ಒತ್ತಾಯಿಸಿದ್ದಾರೆ.