ಶೂನ್ಯ ಬಡ್ಡಿಯಿಂದ ಬ್ಯಾಂಕ್ ಗಳಿಂದ ದೊರೆಯುವ ಸಾಲ ಸೌಲಭ್ಯ ಪಡೆಯಿರಿ: ದೇವೇಂದ್ರಪ್ಪ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ನ.29: ಖಾಸಗಿಯಾಗಿ ದುಬಾರಿ ಬಡ್ಡಿ ಪಡೆದು. ದುಡಿದ ಆದಾಯವನ್ನೆಲ್ಲ ಬಡ್ಡಿಗಾಗಿ ಪಾವತಿಸದೆ. ಬೀದಿ ಬದಿ ನ ರೂಪಿಸಿರುವ ಶೂನ್ಯ ಬಡ್ಡಿಯ ಸಾಲ ಪಡೆದು ಉತ್ತಮ ಜೀವನ ನಡೆಸಬೇಕೆಂದು ಬಳ್ಳಾರಿಯ ಲೋಕಸಭಾ ಸದಸ್ಯ  ವೈ.ದೇವೇಂದ್ರಪ್ಪ ಹೇಳಿದ್ದಾರೆ.
ಅವರು ಇಂದು ತಾಲೂಕಿನ ಮೋಕಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ವಿಕಸಿತ ಭಾರತ  ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರ ಬೆಳೆ ಸಾಲ, ಬೀದಿ ಬದಿ ವ್ಯಾಪಾರದ ಸಾಲ, ವಿಮಾ ಯೋಜನೆ, ಕೃಷಿ ಸಮ್ಮಾನ್, ಉಜ್ವಲ, ಮುದ್ರಾ, ಮನೆ ಮನೆಗೆ  ನಲ್ಲಗಳ ಮೂಲಕ ನೀರು ಸರಬರಾಜು‌ ಮಾಡುವ ಹರ ಗರ್  ಜಲ ಯೋಜನೆ, ಆಯುಷ್ಯ್ ಮಾನ್  ಮೊದಲಾದ ಯೋಜನೆಗಳ ಲಾಭ ಪಡೆಯಬೇಕು ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ   ಹೆಚ್.ಕೆ.ಗಿರಿರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಎರೆಡು ರೀತಿಯ ವಿಮಾ ಯೋಜನೆ ಜಾರಿಗೆ ತಂದಿದ್ದು ಇವುಗಳ ಲಾಭ ಪಡೆದುಕೊಳ್ಳಿ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಲೀಡ್ ಬ್ಯಾಂಕ್ ಅಧಿಕಾರಿ ಸೋಮನಗೌಡ ನ.15 ರಿಂದ ಈ ಸಂಕಲ್ಪ‌ ಯಾತ್ರೆ ಆರಂಭಗೊಂಡಿದೆ. ಜಿಲ್ಲೆಯಲ್ಲಿ  ನ 27 ರಿಂದ ಆರಂಭಗೊಂಡಿದೆ.
ಕೇಂದ್ರ ಸರ್ಕಾರದ 10 ಯೋಜನೆಗಳ ಬಗ್ಗೆ ಜನತೆಗೆ ತಿಳಿಸಿ ಅದರ ಲಾಭ ಪಡೆಯುವಂತಾಗಲು ಈ ಕಾರ್ಯಕ್ರಮ ಆಯೋಜನೆ ಮಾಡಿದೆಂದರು.
ಕವನ‌ ಅವರು ಪ್ರತಿಜ್ಞಾ ವಿಧಿ ಭೋಧಿಸಿದರು. ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಭುವನೇಶ್ವರ ಕುಮಾರ್ ಕೇಂದ್ರ ಸರ್ಕಾರದ ಪ್ರಾಯೋಜಿತ ಯೋಜನೆಗಳನ್ನು ಫಲಾನುಭವಿಗಳಿಗೆ ವಿತರಿಸಿದರು. ಕೃಷಿಯಲ್ಲಿ ಡ್ರೋನ್ ಬಳಕೆ ಕುರಿತು ಪ್ರಾತ್ಯಕ್ಷಿ ನಡೆಯಿತು.
ಅಂಬಿಕ ಅವರು ಕಾರ್ಯಕ್ರಮ ನಿರೂಪಿಸಿದರು. ನಬಾರ್ಡ್ ನ ಅಧಿಕಾರಿ ಡಿಡಿಎಂ ಯುವರಾಜ್ ಕುಮಾರ್ ಬೈಟ್