ಶೂದ್ರ ವರ್ಗದಿಂದ ಭಾರತ ನಿರ್ಮಾಣ: ಮಾಜಿ ಸಿಎಂ. ಎಂ. ವೀರಪ್ಪ ಮೊಯಿಲಿ

ಕಲಬುರಗಿ:ಡಿ.3: ಶೂದ್ರವರ್ಗದ ಮಹಾನಂದ, ಚಂದ್ರಗುಪ್ತ ಮೌರ್ಯ ಮುಂತಾದವರು ಈ ದೇಶಕ್ಕೆ ದಿಕ್ಕು, ದೆಸೆ ಹಾಗೂ ನಕಾಶೆ ಒದಗಿಸಿದ್ದಲ್ಲದೆ ಇಂಡಿಯಾಇಲ್ಲವೇ ಭಾರತ ಎಂಬ ಕಲ್ಪನೆಯನ್ನುಕಟ್ಟಿಕೊಟ್ಟವರುಎಂದುಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕøತಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.
ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಗರದಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದಕನ್ನಡಜಾಗೃತಿ ಸಮಾವೇಶಹಾಗೂ ಪತ್ರಕರ್ತಡಾ. ಶಿವರಂಜನ ಸತ್ಯಂಪೇಟೆ ಸಂಪಾದಿಸಿದ ವಿಜಯ ವಿಶೇಷ (ವರ್ಷಎರಡು ಹರ್ಷ ನೂರು) ಕೃತಿಜನಾರ್ಪಣೆ ಮಾಡಿ ಮಾತನಾಡಿದಅವರು, ಕನ್ನಡಿಗರು ಸರ್ವೋದಯ, ಸಮನ್ವಯತೆ ಹಾಗೂ ವಿಶಾಲ ದೃಷ್ಟಿ ಬೆಳೆಸಿಕೊಳ್ಳಬೇಕು.ವೈಚಾರಿಕ, ವಿಶ್ವಪ್ರಜ್ಞೆಕನ್ನಡಿಗರದ್ದಾಗಬೇಕುಎಂದುಕರೆ ನೀಡಿದರು.
ದೇಶವನ್ನುಕಾಡುತ್ತಿರುವಜಾತಿ, ಮತದ ಭಿನ್ನಾಭಿಪ್ರಾಯಸೇರಿದಂರೆ ಅನೇಕ ಕ್ಲೇಶಗಳನ್ನು ತೊಡೆದು ಹಾಕಿ, ವಿಶ್ವಮಾನವರಾಗಬೇಕು.ಕನ್ನಡಿಗರು ದ್ವೀಪವಾಗದೆ ಸಾಗರ ಆಗಬೇಕು.ಕನ್ನಡಿಗರು ವಿಶ್ವಭಾಷಾ ಪ್ರಜ್ಞೆ ಬೆಳೆಸಿಕೊಳ್ಳುವ ಮೂಲಕ ಕನ್ನಡಕಟ್ಟುವ ಕೆಲಸದಲ್ಲಿ ನಿರತರಾಗಬೇಕುಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕಲ್ಯಾಣಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿ ಪ್ರಮೀಳಾ ಎಂ.ಕೆ.ಮಾತನಾಡಿ, ಕನ್ನಡ ಭಾಷೆಯಅಭಿಮಾನ ಕೇವಲ ವೇದಿಕೆಗೆ ಸೀಮಿತವಾಗದೆ ನಿರಂತರವಾಗಿಜನಮಾನಸದಲ್ಲಿ ಉಳಿಯುವಂತಾಗಬೇಕು.ಕನ್ನಡಕಟ್ಟುವಅವಕಾಶವನ್ನುಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರತೇಗಲತಿಪ್ಪಿಅವರು ಬಹಳ ಉತ್ಸುಕತೆಯಿಂದ ಬಳಸಿಕೊಳ್ಳುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೃತಿ ಸಂಪಾದಕಡಾ. ಶಿವರಂಜನ ಸತ್ಯಂಪೇಟೆ ಮಾತನಾಡಿ, ಈ ಕಿರು ಹೊತ್ತಿಗೆಯಲ್ಲಿಕನ್ನಡ ಭಾಷೆ, ಗಡಿ, ಮಹಿಳೆ, ಮಕ್ಕಳು, ಪ್ರಜೆಗಳ ಹಕ್ಕು ಹಾಗೂ ಕರ್ತವ್ಯ, ಕೃಷಿ, ಮಾಧ್ಯಮ, ಕಲೆ, ಸಾಹಿತ್ಯ ಸಂಗೀತ ಹೀಗೆ ಬದುಕಿನಎಲ್ಲ ಕ್ಷೇತ್ರಗಳ ಬಗ್ಗೆ ಸ್ವಾಮೀಜಿಗಳು, ರಾಜಕಾರಣಿಗಳು, ಸಾಹಿತಿಗಳು ಹಾಗೂ ಜನಸಮಾನ್ಯರಅಭಿಮತವನ್ನುಇಲ್ಲಿ ಸಂಗ್ರಹಿಸಿಕೊಡಲಾಗಿದೆ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿಅಧ್ಯಕ್ಷತೆ ವಹಿಸಿದ್ದರು.ರವೀಂದ್ರಕುಮಾರ ಭಂಟನಳ್ಳಿ ನಿರೂಪಿಸಿದರು. ಯಶವಂತರಾಯ ಅಷ್ಟಗಿ ಸ್ವಾಗತಿಸಿದರು.ಮುಡಬಿ ಗುಂಡೇರಾವ ಪ್ರಾಸ್ತಾವಿಕ ಮಾತನಾಡಿದರು.ಕಲ್ಯಾಣಕುಮಾರ ಶೀಲವಂತ ವಂದಿಸಿದರು.


ಸಾಹಿತ್ಯದಿಂದ ಮನಸ್ಸು ಪರಿವರ್ತನೆಯಾಗಬೇಕು.ಜಾಗತಿಕ ಭಾಷೆಯ ಸಾಹಿತ್ಯಕನ್ನಡದಲ್ಲಿ ಸಂಗ್ರಹವಾಗಬೇಕು. ಕನ್ನಡಿಗರು ಹೊಸ ಅನ್ವೇಷಣೆಯಲ್ಲಿತೊಡಗುವ ಮೂಲಕ ಕನ್ನಡ ಭಾಷೆಗೆ ಭದ್ರ ಬುನಾದಿ ಒದಗಿಸಬೇಕು.
-ಎಂ.ವೀರಪ್ಪ ಮೊಯಿಲಿ, ಮಾಜಿ ಸಿಎಂ