ಶೂದ್ರರ, ಯಾರು ? ಪುಸ್ತಕ ಬಿಡುಗಡೆ


ಬಾದಾಮಿ,ನ.9- ಸರಕಾರ ಹಿಂದುಳಿದ ವರ್ಗಗಳ ಸಲುವಾಗಿ ಅನೇಕ ಆಯೋಗಗಳನ್ನು ರಚಿಸಿದೆ. ಆಯೋಗಗಳು ವರದಿ ಕೊಟ್ಟಿವೆ ಆದರೆ ವರದಿ ಜಾರಿಯಾಗಿಲ್ಲ ಎಂದು ಸತ್ಯ ಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು.
ರವಿವಾರ ನಗರದ ತಾ.ಪಂ.ಸಭಾಭವನದಲ್ಲಿ ಸತ್ಯ ಶೋಧಕ ಸಂಘದ ತಾಲೂಕಾ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಶೂದ್ರರು ಯಾರು? ಕೋರೆಗಾಂವ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಪರಿಚಯ ಮಾಡಿ ಮಾತನಾಡಿದರು. ಸಮಾಜದಲ್ಲಿರುವ ಜಾತಿ ವ್ಯವಸ್ಥೆ ತೊಲಗಿಸಲು ಶೂದ್ರರು ತಯಾರಾಗಬೇಕು. ಇಂದಿಗೂ ಎಸ್.ಸಿ, ಎಸ್.ಟಿ.ಜನರ ಮೇಲೆ ಗ್ರಾಮೀಣ ಭಾಗದ ಶೂದ್ರರು ಜಗಳವಾಡುತ್ತಿದ್ದಾರೆ. ಎಲ್ಲರಲ್ಲಿಯೂ ಸಹೋದರತೆ ಭಾವನೆ ಬೆಳೆಯಬೇಕು. ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಬೇಕು. ಜಾತಿ ವ್ಯವಸ್ಥೆ ನಾಶ ಮಾಡಲು ಎಲ್ಲರೂ ದೃಢ ನಿರ್ಧಾರ ಮಾಡಬೇಕು ಭಾರತ ದೇಶದಲ್ಲಿರುವ ಶೇ 80 ಶೂದ್ರರು ಎಲ್ಲರೂ ಜಾಗೃತರಾಬೇಕಿದೆ. ಡಾ.ಅಂಬೇಡ್ಕರ ಇವರು ಬರೆದಿರುವ ಸಂಶೋಧನೆ ಪುಸ್ತಕವನ್ನು ಎಲ್ಲರೂ ಓದಬೇಕು ಎಂದು ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಹೇಳಿದರು. ಭಾರತ ದೇಶದಲ್ಲಿ ಶೇ80 ಜನರು ಶೂದ್ರರು, ಹಿಂದುಳಿದ ವರ್ಗದವರಾಗಿದ್ದು, ಸರಕಾರ ಹಿಂದುಳಿದ ವರ್ಗಗಳ ಅಭಿವೃದ್ಧಿ ಸಲುವಾಗಿ ಅನೇಕ ಆರೋಗಗಳನ್ನು ರಚಿಸಿದೆ. ಹಾವನೂರ, ದ್ವಾರಕಾನಾಥ, ರವಿ ವರ್ಮ ಕುಮಾರ, ವೆಂಕಟರಾಮ, ಎಚ್.ಕಾಂತರಾಜ ವರದಿಗಳನ್ನು ಸಲ್ಲಿಸಿದ್ದು, ಆದರೆ ಇರುವರೆಗೆ ಆಯೋಗದ ವರದಿ ಜಾರಿಯಾಗಿಲ್ಲ. ವರದಿಯ ಲಾಭ ಬೇರೆಯವರಿಗೆ ಆಗುತ್ತಿದೆ. ಆದರೆ ರಾಜಕೀಯ ಮೀಸಲಾತಿ ಜಾರಿಯಾಗಿಲ್ಲ ಎಂದು ಹೇಳಿದರು. ವೇದಿಕೆಯ ಮೇಲೆ ಪದವಿ ಕಾಲೇಜಿನ ಪ್ರಾಚಾರ್ಯ. ಜಿ.ಜಿ.ಹಿರೇಮಠ, ಕಾಳಿದಾಸ ಕಾಲೇಜಿನ ಪ್ರಾಚಾರ್ಯ ನಾಗರಾಜ ಹೊಟ್ಟಿ, ಮಾಜಿ ಜಿ.ಪಂ,ಉಪಾಧ್ಯಕ್ಷ ಡಾ.ಎಂ.ಎಚ್.ಚಲವಾದಿ, ನಿವೃತ್ತ ಪ್ರಾಚಾರ್ಯ ಜಿ.ಬಿ.ಶೀಲವಂತರ, ಅಂಜುಮನ್ ಸಂಸ್ಥೆಯ ಚೇರಮನ್ ಜಮೀಲ್ ನಾಯಕ, ಸಮಾಜ ಸೇವಕ, ಲಕ್ಷ್ಮಣ ಮರಡಿತೋಟದ, ಅಕ್ವರ ಇಂಡಿಕರ, ಕೃಷ್ಣಗೌಡ ನಾಡಗೌಡ್ರ, ಮುನ್ನಾಬಾಯಿ ಸತಾರಕರ, ಹೇಮಂತ ದೊಡಮನಿ, ಬಿ.ಡಿ.ತಿಮ್ಮನಗೌಡರ ಸೇರಿದಂತೆ ಮುಂತಾದವರು ಹಾಜರಿದ್ದರು. ಕಾಂತಿಚಂದ್ರ ಜ್ಯೋತಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ತಾಲೂಕಿನ ವಿವಿದ ಭಾಗಗಳಿಂದ ಬಂದ ಗ್ರಾಮೀಣ ಭಾಗದ ಜನರು, ಯುವಕರು, ಭಾಗವಹಿಸಿದ್ದರು.