ಜೇವರ್ಗಿ :ಜೂ.28 : ತಾಲೂಕಿನ ನಾರಾಯಣಪೂರ ಗ್ರಾಮದ ಸಾಯಬಣ್ಣ ಕರಜಗಿಯನ್ನು ಟ್ರಾಕ್ಟರ್ ಮಾಲಿಕನೆಂಬ ಕಾರಣಕ್ಕೆ ಸುಳ್ಳು ಕೆಸ್ ಹಾಕಿ ಹಾಗೂ ರಾಜಕಿಯ ದುರುದ್ವೇಶದಿಂದ ಪೊಲೀಸ್ ಇಲಾಖೆಯವರು ಶೂಟೌಟ್ ಮಾಡಿದ್ದಾರೆ ಎಂದು ಜಿಲ್ಲಾ. ಪಂಚಾಯತ್ ಮಾಜಿ ಸದಸ್ಯೆ ಶೋಭಾ ಭಾಣಿ ಪೊಲೀಸ್ ಇಲಾಖೆ ಹಾಗೂ ಶಾಸಕರ ಮೇಲೆ ಕೀಡಿಕಾರಿದರು.
ಪಟ್ಟಣದ ತಹಸೀಲ್ ಆವರಣದಲ್ಲಿ ಕೋಲಿ ಸಮಾಜ ತಾಲೂಕ ಸಮೀತಿ ಜೇವರ್ಗಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೆಶಿಸಿ ಶೋಭಾ ಭಾಣಿ ಮಾತನಾಡಿ ನಮ್ಮ ಸಮಾಜದವನ ಮೇಲೆ ಸುಳ್ಳು ಕೇಸ್ ದಾಕಲಿಸಿ ಅವನನ್ನ ಪೊಲೀಸ್ ಇಲಾಖೆಯವರು ಶೂಟೌಟ್ ಮಾಡಿದ್ದಾರೆ. ಪೊಲೀಸ್ ಇಲಾಖೆಯವರು ಇಲ್ಲಸಲ್ಲದ ಆಪಾದನೆಯನ್ನು ಹೊರಿಸಿ ಸುಳ್ಳು ಕೇಸ್ ದಾಕಲಿಸಿ ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡಿ ಚಾರಿತ್ರೆ ವಧೆ ಮಾಡಿದ್ದಾರೆ. ತಾಲೂಕಿನ ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ವಿರೋಧೀಸುವ ಹಿಂದುಳಿದ ವರ್ಗಗಳನ್ನ, ಅದರಲ್ಲು ಕೊಲಿ ಸಮಾಜದವರ ಮೇಲೆ ಸುಳ್ಳು ಕೇಸ್ ದಾಕಲಿಸುತ್ತಿದ್ದಾರೆ. ಅದನ್ನ ಮೇಲಧೀಕಾರಿಗಳು ಸರಿಯಾಗಿ ತನಿಕೆ ಮಾಡಬೇಕು. ತಪ್ಪಿತಸ್ತರ ವಿರೂಧ ಸೂಕ್ತ ಕ್ರಮ ಕೈಗೊಳಬೇಕು. ತಾಲೂಕಿನಲ್ಲಿ ಮತ್ತೊಮ್ಮೆ ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು. ನಮ್ಮ ಸಮಾಜದ ಅಮಾಯಕರನ್ನ ರಕ್ಷಿಸಬೇಕು. ಈ ಪ್ರಕರಣವನ್ನು ಕುಲಂಕುಶವಾಗಿ ಸತ್ಯಾ ಸತ್ಯತೆ ಹೋರಬರಲು ನಿಷಪಕ್ಷಪಾತವಾಗಿ ನ್ಯಾಯಾಂಗ್ ತನಿಕೆ ಆಗಬೇಕು. ತಪ್ಪಿತಸ್ಥರು ಯಾರೆ ಆದರು ಶಿಕ್ಷೇಗೆ ಓಲಪಡಿಸಬೇಕು.
ನಂತರ ಬಿಜೆಪಿ ಗ್ರಾಮಂತರ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೆವಾಡಗಿ ಮಾತನಾಡಿ ತಾಲೂಕಿನಲ್ಲಿ ಮರಳು ಮಾಫೀಯಾ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿಸಂತೆ ಅಮಾಯಕರನ್ನು ಬಂದಿಸಿ ಶೂಟೌಟ್ ಮಾಡಲಾಗಿದೆ. ಶಾಸಕರು ದುರುದ್ವೇಶದಿಂದ ಮಾಡಿರುವ ಶೂಟೌಟ್ ಪ್ರಕರಣವನ್ನು ಒಪ್ಪಿಕೊಂಡಿರುವುದು ನಾಚಿಕೆಗೆಡಿನ ಸಂಗತಿ ಎಂದರು.
ಈ ಸಂದರ್ಭಧಲ್ಲಿ ಕೊಲಿ ಸಮಾಜದ ತಾಲೂಕ ಪ್ರಧಾನ ಕಾರ್ಯದರ್ಶಿ ಭೀಮರಾಯ ಜನಿವಾರ ಬಿಜೆಪಿ ಮುಖಂಡರಾದ ಧರ್ಮಣ್ಣ ದೊಡಮನಿ, ಮಲ್ಲಿನಾಥಗೌಡ ಯಲಗೋಡ, ಭೀಮರಾಯ ಗುಜಗುಂಡ್, ಬಾಬು ಮುತ್ತಕೊಡ, ಜೆಡಿಎಸ್ ಮುಖಂಡರಾದ ಶಂಕರ ಕಟ್ಟಿಸಂಗಾವಿ, ಸಮಾಜದ ಮುಖಂಡರಾದ ಗಿರೀಶ ತುಂಬಗಿ, ಸಾಯಬಣ್ಣ ಗಸ್ತಗರ್, ಅಶೋಕ ಕಂಕಿ, ಶಿವು ನೆಲೋಗಿ, ಮರೆಪ್ಪ ಕೊಳಕೂರ, ಕಾಂತಪ್ಪ ಚನ್ನೂರ, ಶಿವಪುತ್ರಪ್ಪ ಕೊಣಿನ್, ಸಾಯಬಣ್ಣ ತಳವಾರ, ಮಲ್ಲಪ್ಪ ನಾಟೀಕರ್, ಲಕ್ಷ್ಮೀಕಾಂತ ನಾರಾಯಣಪೂರ, ಸಂಗಮೇಶ ಕಟ್ಟಿಸಂಗಾವಿ, ಚಂದ್ರು ತಳವಾರ, ಬಸವರಾಜ ಜಂಬೆರಾಳ, ಚಂದ್ರಕಾಂತ ಯಲಗೋಡ, ಮಹದೇವ ಕಲ್ಲಹಂಗರಗಾ, ದೇವಿಂದ್ರ ಚಿಗರಳ್ಳಿ, ಬಸವರಾಜ ಕಲ್ಲಹಂಗರಗಾ, ಗೊಲ್ಲಾಳಪ್ಪ ದೊಡಮನಿ, ಆಕಾಶ ತಳವಾರ, ರಾಹುಲ್ ತಳವಾರ ಸೇರಿದಂತೆ ಅನೇಕರಿದ್ದರು.