ಶೂಟೌಟ್: ಮೂವರಿಗೆ ಗಾಯ

ಡೆಲಾವೆರ್ (ಅಮೆರಿಕಾ), ಎ.೯- ಇಲ್ಲಿನ ಕ್ರಿಸ್ಟಿಯಾನಾ ಮಾಲ್‌ನ ಫುಡ್ ಕೋರ್ಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಗಾಯಗೊಂಡ ಘಟನೆ ನಡೆದಿದೆ. ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸದ್ಯ ತನಿಖೆ ಚುರುಕುಗೊಳಿಸಿದ್ದು, ಅಲ್ಲದೆ ಸ್ಥಳೀಯ ಅಂಗಡಿಗಳನ್ನು ಮುಚ್ಚಲು ಸೂಚಿಸಿದ್ದಾರೆ.
ಡೆಲಾವೆರ್ ರಾಜ್ಯ ಪೊಲೀಸರ ಪ್ರಕಾರ ಗುಂಡಿನ ದಾಳಿ ನಡೆಸಿದ ಶಂಕಿತರನ್ನು ಇನ್ನೂ ಬಂಧಿಸಲಾಗಿಲ್ಲ ಎನ್ನಲಾಗಿದೆ. ಗುಂಡೇಟಿನಿಂದ ಗಾಯಗೊಂಡ ೩ ನಾಗರಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಸಲಾಗಿದೆ ಎಂದು ನಾವು ಖಚಿತಪಡಿಸಬಹುದು. ಕ್ರಿಸ್ತಿಯಾನಾ ಮಾಲ್ ಸುತ್ತಮುತ್ತ ಸದ್ಯ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ಗುಂಡೇಟಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳನ್ನು ನಾವು ಸಂಗ್ರಹಿಸುತ್ತಿದ್ದೇವೆ. ಪ್ರತಿಯೊಬ್ಬರ ತಾಳ್ಮೆಯನ್ನು ನಾವು ಪ್ರಶಂಸಿಸುತ್ತೇವೆ ಎಂದು ಡೆಲಾವೆರ್ ಪೊಲೀಸರು ತಿಳಿಸಿದ್ದಾರೆ. ಇನ್ನು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ತಿಳಿದು ಬಂದಿಲ್ಲ.