ಶೂಟಿಂಗ್ ಚಾಂಪಿಯನ್: ಸಾನಿಕಾ ಪ್ರಥಮ

ತುಮಕೂರು, ಜು. ೧೮- ಬೆಂಗಳೂರಿನಲ್ಲಿ ನಡೆದ ೧೦ನೇ ರಾಜ್ಯಮಟ್ಟದ ಶೂಟಿಂಗ್ ಚಾಂಪಿಯನ್ ಶಿಫ್‌ನಲ್ಲಿ ತುಮಕೂರಿನ ಸಾನಿಕ ಸುಲ್ತಾನ್‌ರವರು ಸಬ್ ಯೂತ್ ಉಮೇನ್ ವೈಯುಕ್ತಿಕ ವಿಭಾಗದಲ್ಲಿ ೪೦೦ ಅಂಕಗಳಲ್ಲಿ ೩೯೨ ಅಂಕಗಳನ್ನು ಪಡೆಯುವ ಮೂಲಕ ಮೊದಲ ಸ್ಥಾನ ಪಡೆದ ಚಿನ್ನದ ಪದಕ ಹಾಗೂ ಯೂತ್ ಅಂಡ್ ಜೂನಿಯರ್ ವಿಭಾಗದಲ್ಲಿ ಬೆಳ್ಳಿಯ ಪದಕ ಪಡೆದಿದ್ದಾರೆ. ನಗರದ ಸೆಂಟ್‌ಮೇರಿಸ್ ಶಾಲೆಯ ೯ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಾನಿಕ ಸುಲ್ತಾನ, ವಿವೇಕಾನಂದ ರೈಫಲ್ ಶೂಟಿಂಗ್ ಸಂಸ್ಥೆಯ ತರಬೇತುದಾರರಾದ ಅನಿಲ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.