ಶುಲ್ಕ ಸಹಿತ ಬಳಕೆಯ ಶೌಚಾಲಯ

(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.03: ನಗರದ ವಾಲ್ಮೀಕಿ ವೃತ್ತಕ್ಕೆ  ಇನ್ ಫ್ಯಾಂಟ್ರಿ ರಸ್ತೆಯಿಂದ ಬರುವ ರಸ್ತೆಯಲ್ಲಿ ಪಾಲಿಕೆಯಿಂದ ಶುಲ್ಕ ನೀಡಿ ಬಳಸುವ ಶೌಚಾಲಯವನ್ನು ಹೊಸದಾಗಿ ನಿರ್ಮಿಸಿದೆ.
ಈ ಮೊದಲು ಶೌಚಾಲಯ ಇಲ್ಲದ ಕಾರಣ ಬಯಲಲ್ಲೇ ಜನತೆ ಶೌಚ ಮಾಡುತ್ತಿದ್ದರು. ಇದನ್ನು ಮನಗಂಡು ಪಾಲಿಕೆ ಖಾಸಗಿಯವರಿಗೆ ಟೆಂಡರ್ ನೀಡಿ ಇದನ್ನು ನಿರ್ಮಿಸಿದೆ