ಶುಲ್ಕ ವಸೂಲಿ ಆದೇಶ ಹಿಂಪಡೆಯಲು ಆಗ್ರಹ

ಕೋಲಾರ, ಮಾ.೨೭- ಜನಸಾಮಾನ್ಯರಿಗೆ ಹೊರೆ ಆಗುತ್ತಿರುವ ಆಧಾರ್ ಪ್ಯಾನ್ ಕಾರ್ಡ್ ನಂಬರ್ ಜೋಡನೆ ಹೆಸರಿನಲ್ಲಿ ಸಾವಿರ ರೂಪಾಯಿ ಶುಲ್ಕ ವಸೂಲಿ ಮಾಡುತ್ತಿರುವ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ ಪತ್ರಿಕಾ ಹೇಳಿಕೆ ಮುಖಾಂತರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ರವರು ದಿನೇ ದಿನೇ ಏರಿಕೆ ಆಗುತ್ತಿರುವ ಅಗತ್ಯ ವಸ್ತುಗಳು ಹಾಗೂ ಸಿಲಿಂಡರ್ ಬೆಲೆ ಏರಕೆಯಿಂದ ತತ್ತರಿಸಿರುವ ಜೊತೆಗೆ ಸಾಂಕ್ರಾಮಿಕ ರೋಗಗಳಿಗೆ ಪ್ರಕೃತಿ ವಿಕೋಪಗಳಿಂದ ಜನ ಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ. ಆದರ ಜೊತೆಯಲ್ಲೇ ಕೇಂದ್ರ ಸರ್ಕಾರ ಪ್ರತಿಯೊಬ್ಬ ಬ್ಯಾಂಕ್ ಖಾತೆ ಹೊಂದಿರುವ ಖಾತೆದಾರರು ಆಧಾಯ ತೆರಿಗೆ ಕಾಯ್ದೆ ಸಾವಿರದ ೧೯೬೧ ರ ಪ್ರಕಾರ ಪ್ಯಾನ್ ಕಾರ್ಡ್ ಹೊಂದಿರುವ ಎಲ್ಲರೂ ತಮ್ಮ ಪ್ಯಾನ್‌ನ್ನು ಆದಾರ್‌ನೊಂದಿಗೆ ಲಿಂಕ್ ಮಾಡುವ ಉದ್ದೇಶಕ್ಕೆ ನಮ್ಮ ಅಭ್ಯಂತರ ವಿಲ್ಲ.
ಆದರೆ ಲಿಂಕ್ ನೆಪದಲ್ಲಿ ಪ್ರತಿ ಖಾತೆದಾರ ನಿಂದ ಸಾವಿರ ರೂಪಾಯಿ ವಸೂಲಿ ಮಾಡುವ ಮಾ ೩೧ ರೊಳಗೆ ಲಿಂಕ್ ಮಾಡದೇ ಇದ್ದರೆ ಏಪ್ರಿಲ್ ೧ ರಿಂದ ೧೦ ಸಾವಿರ ದಂಡದೊಂದಿಗೆ ಲಿಂಕ್ ಮಾಡುವ ಆದೇಶವನ್ನು ಹೊರಡಿಸಿರುವುದು ಆದಾರ್ ನೆಪದಲ್ಲಿ ದೇಶದ ೧೩೫ ಕೋಟಿ ಜನರಿಂದ ಸಾವಿರಾರು ಕೋಟಿ ಹಗಲು ದರೋಡೆ ಮಾಡಲು ಹೊರಟಿರುವ ಸರ್ಕಾರದ ಆದೇಶ ಜನವಿರೋದಿ ಆಗಿದೆ ಕೂಡಲೇ ಸರ್ಕಾರದ ಆದೇವನ್ನು ಕೈಬಿಟ್ಟು ಆದಾರ್ ಲಿಂಕ್ ೬ ತಿಂಗಳ ಕಾಲ ಶುಲ್ಕವಿಲ್ಲದೆ ಅವಕಾಶ ನೀಡಬೇಕೆಂದು ಸರ್ಕಾರವನ್ನು ಒತ್ತಾಯ ಮಾಡಿದರು.
ಇಲ್ಲವಾದರೆ ಈಗಾಗಲೇ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಮತ ಕೇಳಲು ಜನ ಪ್ರತಿನಿದಿಗಳಿಗೆ ಮುಖಕ್ಕೆ ಮಂಗಳಾರತಿ ಮಾಡುವ ಕಾಲ ದೂರವಿಲ್ಲ ಎಂದು ಜನಪ್ರತಿನಿದಿಗಳಿಗೆ ಎಚ್ಚರಿಕೆಯ ಭವಿಷ್ಯವನ್ನು ನೀಡಿದರು.