
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜು,18- ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಶುರುವಾಗಿದೆ. ಈ ವರೆಗೆ ಜಿಲ್ಲಾಧಿಕಾರಿತಾಗಿದ್ದ ಪವನ್ ಕುಮಾರ್ ಮಾಲಪಾಟಿ ಅವರನ್ನು ವರ್ಗ ಮಾಡಿದ್ದು. ಅವರ ಸ್ಥಾನಕ್ಕೆ ವಿಜಯನಗರ ಜಿಲ್ಲಾಧಿಕಾರಿಯಾಗಿದ್ದ ಟಿ.ವೆಂಕಟೇಶ್ ಅವರನ್ನು ನೇಮಕ ಮಾಡಲಾಗಿದೆ. ಮಾಲಪಟಿ ಅವರಿಗೆ ವರ್ಗಾವಣೆ ಸ್ಥಳ ಇನ್ನೂ ನಿಯುಕ್ತಿಯಾಗಿಲ್ಲ.
ಕಳೆದ ತಿಂಗಳು 26 ರಂದೇ ಸಂಜೆವಾಣಿ “ಡಿಸಿನ ಟ್ರಾನ್ಸ್‌ಫರ್ ಮಾಡಸ್ತಾರಂತೆ” ಎಂಬ ಶೀರ್ಷಿಕೆ ಅಡಿ ವರದಿ ಪ್ರಕಟಿಸಿತ್ತು.
ಸಹಜವಾಗಿ ಉನ್ನತ ಅಧಿಕಾರಿಗಳಿಗೆ ಮೂರು ವರ್ಷಕ್ಕೆ ಒಮ್ಮೆ ವರ್ಗಾವಣೆ ಇರುತ್ತೆ. ಮಾಲಪಾಟಿ ಅವರ ಬಂದು ಮೂರು ವರ್ಷ ಆಗಿರಲಿಲ್ಲ. ಆದರೆ ಅವರು ಇಗ ಅಧಿಕಾರಕ್ಕೆ ಬಂದ ಕೆಲವರಿಗೆ ಕಳೆದ ಸರ್ಕಾರದ ಅವಧಿಯಲ್ಲಿ ಸಹಕಾರ ಮಾಡಿರಲಿಲ್ಲ ಎಂಬ ಕಾರಣಕ್ಕೆ ವರ್ಗಾವಣೆ ಮಾಡಿಸಲು ಮುಂದಾಗಿದ್ದರಂತೆ. ಅದರಂತೆ ನಡೆದಿದೆ.
ಇನ್ನು ಇಗ ಡಿಸಿಯಾಗಿ ಬರುತ್ತಿರುವ ಟಿ.ವೆಂಕಟೇಶ್ ಅವರು ಈ ಹಿಂದೆ ಎಡಿಸಿಯಾಗಿ ಇಲ್ಲಿ ಸೇವೆ ಸಲ್ಲಿಸಿ ಮೈಸೂರಿಗೆ ವರ್ಗವಾಗಿದ್ದರು. ಅಲ್ಲಿಂದ ಹೊಸಪೇಟೆಗೆ ಬಂದಿದ್ದರು. ಈಗ ಬಳ್ಳಾರಿಗೆ ಡಿಸಿಯಾಗಿ ಬರುತ್ತಿದ್ದಾರೆ. ಅವರಿಗೆ ಈ ಹಿಂದಿನ ಸೇವಾ ಅನುಭವದಿಂದ ಇಲ್ಲಿನ ಮುಖಂಡರ, ಕ್ಷೇತ್ರದ ಸಮಗ್ರ ಪರಿಚಯವಿದೆ. ಎಲ್ಲರೊಂದಿಗೆ ಬೆರೆತು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಾರೆಂದು ಇಲ್ಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಜಿಲ್ಲೆಯ ಜನಪ್ರತಿನಿಧಿಗಳು.
ಡಿಸಿ ವರ್ಗಾವಣೆ ಮೂಲಕ ಜಿಲ್ಲಾ ಮಟ್ಟ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ವರ್ಗಾವಣೆ ಇನ್ನೇನು ಕೆಲವೇ ದಿನಗಳಲ್ಲಿ ಹೊರ ಬೀಳಲಿದೆ.
ಎಎಸ್ಪಿ ಸ್ಥಾನಕ್ಕೆ ಈ ಹಿಂದೆ ಇಲ್ಲಿ ಗ್ರಾಮಿಣ ಠಾಣೆ ಸಿಪಿಏ ಆಗಿ ಕಾರ್ಯ ನಿರ್ವಹಿಸಿದ್ದ ಸಿರುಗುಪ್ಪದ ಅಳಿಯ ಲಕ್ಷ್ಮಣ ಶಿರ್ಕೋಳ್ ಅವರು ಬರುತ್ತಾರೆಂಬ ಮಾಹಿತಿ ಇದೆ.
ಇನ್ನು ಗ್ರಾಮೀಣ, ಕೌಲ್ ಬಜಾರ್, ಮಹಿಳಾ ಠಾಣೆ ಸೇರಿದಂತೆ ವಿವಿಧ ಠಾಣೆಗಳ ಸಿಪಿಐಗಳ ಬದಲಾವಣೆಗೂ ಪಟ್ಟಿ ಸಿದ್ದವಾಗಿದೆಯಂತೆ.
ಸಧ್ಯ ಬ್ರೂಸ್ ಪೇಟೆ ಸಿಪಿಐ ಅವರ ಬದಲಾವಣೆ ಮಾತ್ರ ಇಲ್ಲ.ಕಾರಣ ಅವರು ಬಂದು ಇನ್ನು ಕೇವಲ ಆರು ತಿಂಗಳು ಆಗಿದೆಯಷ್ಟೇ.
ಹೀಗೆ ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ ಇಲಾಖೆಯಲ್ಲಿ ಹಲವು ವರ್ಷಗಳಿಂದ ಇದೇ ಜಿಲ್ಲೆಯಲ್ಲಿ ಬೇರು ಬಿಟ್ಟಿರುವ ಅಧಿಕಾರಿಗಳ ಬದಲಾವಣೆಯೂ ನಡೆಯಲಿದೆಯಂತೆ. ರಾಜ್ಯ ಮಟ್ಟದಲ್ಲಿ ವರ್ಗಾವಣೆ ದಂಧೆ ವಿಷಯ ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿರುವಾಗ ಜಿಲ್ಲೆಯಲ್ಲಿ ಮಾತ್ರ ನಿಧಾನವಾಗಿ ಈ ವರ್ಗಾವಣೆ ಪ್ರಕ್ರಿಯೆ ನಡೆಯುವುದಂತು ಖಚಿತ.
One attachment • Scanned by Gmail