ಶುರುವಾಯ್ತು ಇನ್ಸುರೆನ್ಸ್ ಪಾಲಿಟಿಕ್ಸ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.07: ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ‌ಭರತ್ ರೆಡ್ಡಿ ಮನೆ ಮನೆಗೂ ಹೋಗಿ ಕುಕ್ಕರ್  ಕೊಟ್ಟರು. ಹಾಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮನೆಗಳ ಹಕ್ಕಿನ  ಪಟ್ಟಾ ವಿತರಣೆ ಮಾಡಿದರು‌. ಕೆಕೆಆರ್ಪಿ ಪಕ್ಷದ ನಗರ ಕ್ಷೇತ್ರದ ಅಭ್ಯರ್ಥಿ ಜನಾರ್ಧನರೆಡ್ಡಿ  ಪತ್ನಿ ಲಕ್ಷ್ಮೀ ಅರುಣಾ ಉಡಿ ತುಂಬೋ ನೆಪದಲ್ಲಿ ಸೀರೆ ಕೊಟ್ಟರು. ಸಚಿವ ಶ್ರೀರಾಮುಲು ಕೂಡ ಶಿಕ್ಷಕ ದಿನಾಚರಣೆ ನೆಪದಲ್ಲಿ  ಶಿಕ್ಷಕರಿಗೆ ಸೀರೆ ಕೊಟ್ಟದ್ದು ಆಯ್ತು.
ಈಗ ಸೀರೆ,ಕುಕ್ಕರ್, ಪಟ್ಟಾ ನಂತರ   ಕೆಕೆಆರ್ಪಿ ಪಕ್ಷದಿಂದ ಇನ್ಷೂರೆನ್ಸ್  ಪಾಲಿಟಿಕ್ಸ್ ಆರಂಭವಾಗಿದೆ.
ಆಟೋ ಚಾಲಕರನ್ನು ಗುರಿ ಮಾಡಿಕೊಂಡ ಜನಾರ್ದನ ರೆಡ್ಡಿ ನಗರ ಕ್ಷೇತ್ರದ ಪಕ್ಷ ಪ್ರತಿಯೊಬ್ಬ ಆಟೋ ಚಾಲಕನಿಗೆ ಅಪಘಾತ ವಿಮೆ ಮಾಡಿಸುತ್ತಿದ್ದಾರೆ.
ಒಂದಲ್ಲ ಎರಡಲ್ಲ ಸಾವಿರಕ್ಕೆ ಅಲ್ಲ ಬರೋಬ್ಬರಿ ಹತ್ತು ಲಕ್ಷದ ವಿಮೆ ಮಾಡಿಸುತ್ತಿದ್ದಾರೆ. ಅದಕ್ಕೆ ಖರ್ಚು ಮಾತ್ರ ಭಾರಿ ಕಡಿಮೆ ಮಾಡಿಮೆ ಅಂದರೆ ಕೇವಲ 600 ರೂ ಆಗುತ್ತದೆ. ಇದರ ಅವಧಿ  ಕೇವಲ ಒಂದು ವರ್ಷಕ್ಕೆ ಮಾತ್ರ ಇರುತ್ತದೆ.
ಅಂಚೆ ಕಚೇರಿಯಿಂದ ಮಾಡಲ್ಪಡುವ  ಕೇಂದ್ರ ಸರ್ಕಾರದ ಈ  ಅಪಘಾತ ವಿಮೆ ಯೋಜನೆ ಮಾಡಿಸೋರಿಗೆ ಖರ್ಚು  ಕಡಿಮೆ. ಲಾಭ ಮಾತ್ರ ಹೆಚ್ಚಾಗಿದೆ.
ಇಂಡಿಯನ್ ಪೋಸ್ಟ್ ಪೇಮೆಂಟ್ ಅಕೌಂಟ್ ಹೆಸರಲ್ಲಿ ನೂರು ರೂಪಾಯಿ ಖಾತೆ ತೆರೆದು ವಿಮೆ ಮಾಡಿಸಬೇಕು.
ಅಪಘಾತದಲ್ಲಿ ಮೃತಪಟ್ಟರೇ ಹತ್ತು ಲಕ್ಷದವರೆಗೂ ಪರಿಹಾರ ನೀಡಲಾಗುತ್ತದೆ. 
ಅಂಗವೈಕಲ್ಯ ಸೇರಿದಂತೆ ಇನ್ನಿತರ ಶಾಶ್ವತ ರೋಗಕ್ಕೆ ಆರವತ್ತು ಸಾವಿರದಿಂದ ಐದು ಲಕ್ಷದವರೆಗೆ ಪರಿಹಾರ ನೀಡಲಾಗ್ತದೆ. ಒಟ್ಟು ಆರು ನೂರು ರೂಪಾಯಿ ಖರ್ಚು ಮಾಡಿ ಹತ್ತು ಲಕ್ಷದ ಬಾಂಡ್ ನೀಡಲಾಗ್ತಿದೆ.
ಈಗಾಗಲೇ ಒಂದು ಸಾವಿರ ಆಟೋ ಚಾಲಕರಿಗೆ ಈ ವಿಮೆ ಮಾಡಿಸಲಾಗಿದೆ. ವಿಮೆ ಮಾಡಿಸಿದವರ  ಆಟೋಗಳಿಗೆ  ಪಕ್ಷದ ಸ್ಟೀಕ್ಕರ್ ಅಂಟಿಸಲಾಗ್ತಿದೆ.

One attachment • Scanned by Gmail