ಶುಭ ಶುಕ್ರವಾರ : ವಿಶೇಷ ಪೂಜೆ


ಸಂಜೆವಾಣಿ ವಾರ್ತೆ
ಸಂಡೂರು:ಏ:9  ಶುಭ ಶುಕ್ರವಾರವು ಕ್ರೈಸ್ತರಿಗೆ ಒಂದು ಪವಿತ್ರವಾದ ದಿನ. ಎಂದು ಕೃಪಾನಿಲಯ ಚರ್ಚನ ಫಾದರ್ ತಿಳಿಸಿದರು.
ವಿಶೇಷ ಪೂಜೆ ಹಾಗೂ ಸಿಲುಬೆಯೊಂದಿಗೆ ನಡೆದು ಅವರ ಅನುಭವಿಸಿದ ಶಿಕ್ಷೆ ಮತ್ತು ಜಗತ್ತಿಗೆ ಸುಖದ ಸಂದೇಶಗಳನ್ನು ತಿಳಿಸುವ ಮೂಲಕ ಶುಭ ಶುಕ್ತವಾರವನ್ನು ಪಟ್ಟಣದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಚರ್ಚನಲ್ಲಿ ವಿಶೇಷವಾದ ಪಾರ್ಥನೆ ಮತ್ತು ಎಲ್ಲಾ ಕ್ರೈಸ ಬಂಧುಗಳು ಸಹ ಭಾಗಿಯಾಗಿ ತಮ್ಮ ಪ್ರಾರ್ಥನೆ ಸಲ್ಲಿಸಿದರು, ಅಲ್ಲದೆ ಸಾಮೂಹಿಕವಾಗಿ ಶಿಲುಬೆಯನ್ನು ಹೊತ್ತು ವಿಶೇಷ ಪ್ರಾರ್ಥನೆಯ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಈ ಸಮದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಅಗಮಿಸಿದ ಭಕ್ತರು ಉಪಸ್ಥಿತರಿದ್ದರು.