ಶುದ್ಧ ಹಾಸ್ಯದ ಮನರಂಜನೆ ಚಿತ್ರದರ್ಬಾರ್

ರಾಮ ಶಾಮ ಭಾಮ, ಕುರಿಗಳು ಸಾರ್ ಕುರಿಗಳು ಚಿತ್ರಗಳ ಮಾದರಿಯ ಸನ್ನಿವೇಶ ಆಧಾರಿತ, ಶುದ್ದ ಮನರಂಜನೆ ಹೂರಣ ಹೊಂದಿರುವ ಚಿತ್ರ “ದರ್ಬಾರ್”. ಮನೆ ಮಂದಿಯಲ್ಲಾ ನೋಡಬಹುದು ಎಂದು ಮಾತು ಹಂಚಿಕೊಂಡರು ನಟ, ನಿರ್ಮಾಪಕ ಸತೀಶ್  ಗೌಡ.

ಹಾಸ್ಯಕ್ಕೆ ಒತ್ತು ನೀಡಿ ನೈಜವಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಸಾಕ್ಷ್ಯಚಿತ್ರದಂತೆ ಪ್ರೇಕ್ಷಕರಿಗೆ ಅನ್ನಿಸಬಾರು ಎನ್ನುವ ಜಾಗೃತೆ ವಹಿಸಿದ್ದೇವೆ. ಚಿತ್ರ ನೋಡುತ್ತಿದ್ದರೆ ಹಳ್ಳಿಗೆ ಹೋಗಿ ಬಂದ ಅನುಭವವಾಗುತ್ತದೆ. ದರ್ಬಾರ್ ಚಿತ್ರವನ್ನು ವಿಡಂಬನೆ ಮತ್ತು ಹಾಸ್ಯದ ಮೂಲಕ ಕಟ್ಟಿಕೊಡುವ ಕೆಲಸ ಮಾಡಿದ್ದಾರೆ ನಿರ್ದೇಶಕ ವಿ.ಮನೋಹರ್ ಎಂದು ಮಾಹಿತಿ ನೀಡಿದರು

ದರ್ಬಾರ್ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ಮಾಹಿತಿ ಹಂಚಿಕೊಂಡ ನಟ ಸತೀಶ್, ನಾಳೆ ರಾಜ್ಯಾದ್ಯಂತ 80 ಕ್ಕೂ ಅಧಿಕ ಚಿತ್ರಮಂದಿರದಲ್ಲಿ ಚಿತ್ರ ತೆರೆಗೆ ಬರಲಿದೆ. ಶುದ್ದ ಕಾಮಿಡಿಗೆ ಒತ್ತು ನೀಡಲಾಗಿದೆ.ಹೀಗಾಗಿ ಮನೆ ಮಂದಿಯೆಲ್ಲಾ ನೋಡಬಹುದು ಎನ್ನುವ ಭರವಸೆ ವ್ಯಕ್ತಪಡಿಸಿದರು.

ಚಿತ್ರದಲ್ಲಿ ಹಳ್ಳಿಯ ಪಟೇಲನ ಮಗ,ಯಾರೂ ಸೋಮಾರಿಯಾಗಿ ಹಳ್ಳಿಯಲ್ಲಿ ಕುಳಿತರಬಾರು ಎನ್ನುವ ನೈತಿಕ ಪೊಲೀಸ್ ಗಿರಿಯ ಪಾತ್ರ. ದಬ್ಬಾಳಿಕೆ, ದೌಜ್ಯನ್ಯ,ದರ್ಪ ದರ್ಬಾರ್ ನಡೆಸುವ ವ್ಯಕ್ತಿತ್ವ ನನ್ನ ಪಾತ್ರದ್ದು ಇದರಿಂದ ರೋಸಿಹೋದ ಹಳ್ಳಿಯ ಜನ ನಾಯಕನ ಸೊಕ್ಕು ಅಡಗಿಸಲು ಚುನಾವಣೆಗೆ ನಿಲ್ಲಿಸುತ್ತಾರೆ.ಅದರಲ್ಲಿ ಆತ ಗೆಲ್ಲುತ್ತಾನಾ ಅಥವಾ ಇಲ್ಲವೆ ಎನ್ನುವುದು ಚಿತ್ರದ ತಿರುಳು ಎಂದರು.

ನಿರ್ದೇಶಕ ವಿ.ಮನೋಹರ್ ಬಹಳ ದಿನದ ನಂತರ ಒಳ್ಳೆಯ ಚಿತ್ರವನ್ನು ತೆರೆಗೆ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅವರೂ ಕೂಡ ಒಂದು ಪಾತ್ರ ಮಾಡಿದ್ದಾರೆ. ಉಳಿದಂತೆ ನಟಿ ಜಾಹ್ನವಿ, ಸಾಧುಕೋಕಿಲ, ನವೀನ್ ಪಡೀಲು, ಕಾಂಇಡಿ ಕಿಲಾಡಿಯ ಸಂತು,ಹುಲಿ ಕಾರ್ತಿಕ್, ಮಂಡ್ಯ ಜಯರಾಮ್, ಎಂ.ಎನ್ ಲಕ್ಷ್ಮಿ ದೇವಿ ಮತ್ತಿತರು ಚಿತ್ರದಲ್ಲಿದ್ದಾರೆ. ಮನರಂಜನೆಯನ್ನೇ ಪ್ರದಾನವಾಗಿರಿಸಿಕೊಂಡು ಚಿತ್ರ ಮಾಡಲಾಗಿದೆ ಎನ್ನುವ ವಿವರ ನೀಡಿದರು.