ಶುದ್ಧ ಪರಿಶ್ರಮದಲ್ಲಿ ಪರಮಾತ್ಮನ ಅಂತ:ಕರಣ:ಹಾರಕೂಡ ಶ್ರೀ

Oplus_131072

ಬೀದರ್:ಮೇ.27: ಭಕ್ತಿಯಿಂದ ಮಾಡಿದ ಪ್ರತಿ ಕಾರ್ಯದಲ್ಲಿಯೂ ಫಲ ಶ್ರುತಿ ನಿಶ್ಚಿತ, ಶುದ್ಧ ಪರಿಶ್ರಮದಲ್ಲಿ ಪರಮಾತ್ಮನ ಅಂತ:ಕರಣವಿರುತ್ತದೆ ಎಂದು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಗದಲೇಗಾಂವ ಬಿ. ಗ್ರಾಮದಲ್ಲಿ ಜರುಗಿದ ಭಕ್ತಿ ನಮನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಹಾರಕೂಡ ಶ್ರೀಗಳು ಭಕ್ತಿಯಿಂದ ಭಾವ ಸೌಂದರ್ಯ ವೃದ್ಧಿಸಿ, ದೇವನೊಲಿಮೆಗೆ ಅರ್ಹತೆ ಪಡೆಯಲು ರಹದಾರಿಯನ್ನು ಒದಗಿಸಿಕೊಡುತ್ತದೆ.
ದುರಾಸೆ ಹಾಗೂ ಅವಸರದಿಂದ ಕೂಡಿದ ಧಾವಂತದ ಜೀವನ ಶೈಲಿಯಿಂದ ಹೊರಬಂದು, ಗುರು ಭಕ್ತಿ, ದೈವಭಕ್ತಿ, ರಾಷ್ಟ್ರಭಕ್ತಿ, ಕಾಯಕ ನಿಷ್ಠೆ, ದಾಸೋಹ, ಪರೋಪಕಾರದಂತಹ ಮೌಲಿಕ ಆಭರಣಗಳು ಧರಿಸಿದ್ದೆ ಆದರೆ ಬದುಕಿಗೊಂದು ಧನ್ಯತೆ ಬರುತ್ತದೆ.
ಪ್ರಕೃತಿ ಸಹಜ ಬಾಳ್ವೆಯಿಂದ ಆನಂದದ ಅನುಭೂತಿ ಲಭಿಸುತ್ತದೆ.
ಗದಲೇಗಾಂವ ಬಿ ಗ್ರಾಮಸ್ಥರ ಭಕ್ತಿ ನಮಗೆ ಖುಷಿ ನೀಡಿದ್ದು ಸರ್ವರಿಗೂ ಭಗವದ್ ಕೃಪೆಯ ಶ್ರೀರಕ್ಷೆ ದೊರಕುವಂತಾಗಲಿ ಎಂದು ಶುಭ ಹಾರೈಸಿದರು.
ಗುರುಲಿಂಗಪ್ಪ ದೇಗಾಂವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಲ್ಲಿನಾಥ ಹಿರೇಮಠ ಹಾರಕೂಡ, ಗೋಪಾಲರಾವ ದೇಗಾಂವ, ಪುಂಡಲೀಕರೆಡ್ಡಿ ಹರಿದಾಸ್, ಪಂಡಿತರಾವ ಪೆÇಲೀಸ್ ಪಾಟೀಲ, ರಾಜಕುಮಾರ ಪಾಟೀಲ, ಪ್ರತ್ವರಾಜ ದೇಗಾಂವ, ಬಾಬುಸಾಬ್ ಪಟೇಲ್, ಕಾಶಪ್ಪ ದೇಗಾಂವ, ತುಕಾರಾಮರೆಡ್ಡಿ, ವೆಂಕಟರೆಡ್ಡಿ ಬಂದೆ, ಜ್ಞಾನರೆಡ್ಡಿ ಉಪಸ್ಥಿತರಿದ್ದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ವಿರಾರೆಡ್ಡಿ ಕುಸಂಗೆ ವಂದಿಸಿದರು.
ಸಮಸ್ತ ಗದಲೇಗಾಂವ ಬಿ. ಗ್ರಾಮದ ಸದ್ಭಕ್ತರು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರಿಗೆ 648ನೇ ತುಲಾಭಾರ ನೆರವೇರಿಸಿ ಆಶೀರ್ವಾದ ಪಡೆದರು.
ಇದಕ್ಕೂ ಮುನ್ನ ಗ್ರಾಮದ ಹೊರವಲಯದಿಂದ ಶ್ರೀ ಹನುಮಾನ ಮಂದಿರದವರಿಗೆ ಹಾರಕೂಡ ಪೂಜ್ಯರ ಅದ್ದೂರಿ ಮೆರವಣಿಗೆ ಜರುಗಿತು