ಶುದ್ಧ ಕುಡಿವ ನೀರಿನ ಘಟಕ ದುರಸ್ಥಿಗೆ ಆಗ್ರಹ.

ಸಂಜೆವಾಣಿ ವಾರ್ತೆ
ಸಿರಿಗೇರಿ ಡಿ.05. ಗ್ರಾಮದ 3ನೇ ವಾರ್ಡಿನಲ್ಲಿನ ಶುದ್ಧ ಕುಡಿವ ನೀರಿನ ಘಟಕ ತಾಂತ್ರಿಕ ತೊಂದರೆಯಿಂದಾಗಿ ಸ್ಥಗಿತಗೊಂಡಿದೆ. ಕೆರೆಗಡ್ಡೆ ಪ್ರದೇಶದಲ್ಲಿ ಇರುವ ಈ ಘಟಕ ವ್ಯಾಪ್ತಿಗೆ ನೂರಾರು ಮನೆಗಳವರು ಕುಡಿವ ನೀರಿಗಾಗಿ ಆಶ್ರಯಿಸಿದ್ದು ಈ ಘಟಕ ಈಗ 2 ತಿಂಗಳಿನಿಂದ ಕೆಟ್ಟುನಿಂತು ತೊಂದರೆ ಆಗಿದೆ. ಘಟಕದಲ್ಲಿನ ನೀರೆತ್ತುವ ಮೋಟರ್ಗಳು ಸುಡತಿಯಿಂದ ಕೆಟ್ಟುನಿಂತು ತೊಂದರೆಯಾಗಿರುವುದನ್ನು ಜನಪ್ರತಿನಿಧಿಗಳ, ಗ್ರಾಮ ಪಂಚಾಯಿತಿ ಗಮನಕ್ಕೆ ತಂದರು 2ತಿಂಗಳು ಕಳೆದರೂ ಯಾವುದೇ ಪ್ರಯೋಜನ ಆಗಿಲ್ಲ. ಈ ವಾರ್ಡಿನಲ್ಲಿ ಸಾರ್ವಜನಿಕ ಕೊಳಾಯಿಗಳಿಂದ ಬರುವ ನೀರು ಕುಡಿಯಲು ಸಪ್ಪೆಯಾಗಿದ್ದು,  ಅಡಿಗೆ ಮಾಡಲೂ ಬರುವುದಿಲ್ಲ. ಒಳ್ಳೆಯ ಸಿಹಿ ನೀರಿಗಾಗಿ ದೂರದ ಕಾಲುವೆಯಿಂದ, ಅಥವಾ ಗ್ರಾಮದ ಬಳ್ಳಾರಿ ರಸ್ತೆಯ ಹೊಸೂರಿನಲ್ಲಿರುವ ಖಾಸಗಿ ಕುಡಿವ ನೀರಿನ ಘಟಕದಿಂದ ಹೆಚ್ಚು ಹಣಕೊಟ್ಟು ನೀರು ತರುತ್ತೀದ್ದೇವೆಂದು ಇಲ್ಲಿನ ನಿವಾಸಿಗಳು ತಮ್ಮ ತೊಂದರೆ ಹೇಳುತ್ತಿದ್ದಾರೆ. ಕೂಡಲೇ ಗ್ರಾಮ ಆಡಳಿತ ಶುದ್ದ ಕುಡಿವ ನೀರಿನ ಘಟಕ ದೂರಸ್ತಿಗೊಳಿಸಬೇಕೆಂದು ಇಲ್ಲಿನ ನಿವಾಸಿಗಳು ಆಗ್ರಹಪಡಿಸಿದ್ದಾರೆ.