ಶುದ್ಧ ಕುಡಿಯುವ ನೀರು ಮನೆ ಮನೆಗೆ

(ಸಂಜೆವಾಣಿ ವಾರ್ತೆ)
ಹುಮನಾಬಾದ್ :ಜು.31: ಮನೆಗಳಿಗೆ ಶುದ್ಧ ಮತ್ತು ಸಮರ್ಪಕವಾಗಿ ಶುದ್ಧ ಕುಡಿಯುವ ನೀರು ಪೂರೈಕೆಗೆ ‘ ಮನೆ ಮನೆಗೆ ಗಂಗೆ ‘ ಯೋಜನೆ ಸಹಕಾರಿ ಆಗಿದೆ ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು . ತಾಲ್ಲೂಕಿನ ಓತಗಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ 71.20 ಕೋಟಿ ಅನುದಾನದಲ್ಲಿ ‘ ಮನೆ ಮನೆಗೆ ಗಂಗೆ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು .
682 ಗ್ರಾಮದಲ್ಲಿ ಮನೆಗಳಿಗೆ ಒಟ್ಟು ನಳಗಳ ಜೋಡಣೆ ಕಾರ್ಯ ನಡೆಯಲ್ಲಿದೆ . ಹೀಗಾಗಿ ನಿಮ್ಮ ಗ್ರಾಮದಲ್ಲಿ ಕಾಮಗಾರಿ ನಡೆಯುತ್ತಿದೆ , ಗ್ರಾಮಸ್ಥರು ಸೂಕ್ಷ್ಮವಾಗಿ ಈ ಕೆಲಸದ ಗಮನಿಸಬೇಕು . ಕಾಮಗಾರಿ ಕಂಡುಬಂದರೆ ತಕ್ಷಣ ಬಗ್ಗೆ ಕಳಪೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು
ವಿಧಾನ ಪರಿಷತ್ ಸದಸ್ಯ ಭೀಮಾರಾವ್ ಪಾಟೀಲ ಮಾತನಾಡಿ , ಕಾಮಗಾರಿ ಪಾರದರ್ಶಕವಾಗಿ ನಡೆಯಬೇಕು . ಗ್ರಾಮಸ್ಥರು ಸದುಪಯೋಗ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರು . ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ಕಾಡಗೊಂಡ , ಅಪ್ಪರ್ ಮಿಯಾ , ತಾ.ಪಂ.ಇಒ ಗೋವಿಂದ್ , ದತ್ತಾತ್ರೇಯ ಮೇಧಾ , ಪ್ರಮುಖರಾದ
ದಸ್ತಗೀರಿ ಕಾಡಗೊಂಡ , ಅಶೋಕ ಪಟೇಲ್ , ಶಿವರಾಜ ಪ್ರಕಾಶ ಸ್ವಾಮಿ ವರ್ಮಾ , ಶಿವಾನಂದ ಕಾಡಗೊಂಡ , ಪ್ರಭುರಾವ ತಾಳಮಡಗಿ , ಸುರೇಶ ಘಾಂಗ್ರೇ , ಜ್ಞಾನೇಶ್ವರ ಭೋಸೆ , ಕರಬಸಪ್ಪ ಮೇತ್ರೆ , ಬಿ.ಜಿ ಪಾಟೀಲ , ರಫಿಯೋದ್ದಿನ್ , ಖದೀರ್ ಪಟೇಲ್ , ಶಂಕರ ಬಿರಾದಾರ , ಮಲ್ಲಿಕಾರ್ಜುನ್ ರೆಡ್ಡಿ , ಮಹ್ಮದ್ ಭಂಗಿ , ಮಸ್ತಾನ್ ಭಂಗಿ ಸೇರಿದಂತೆ ಇತರರು ಇದ್ದರು