
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮೇ.18: ಹಲವು ತಿಂಗಳಿಂದ ನೆನೆಗುದಿಗೆ ಬಿದ್ದ ಶುದ್ದ ಕುಡಿಯುವ ನೀರಿನ ಘಟಕಕ್ಕೆ ದುರಸ್ಥಿ ಭಾಗ್ಯ ಸಿಕ್ಕಿದೆ. ಇದರಿಂದ ಜನರ ನೀರಿನ ದಾಹ ತೀರಿಸಿದಂತಾಗಿದೆ.
ಹೌದು ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಜನರು ದಿನ ಪ್ರತಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಮನೆಯಲ್ಲಿ ಬೈಕ್ ಇದ್ದವರು ಕೊಟ್ಟೂರಿಗೆ ಹೋಗಿ ಶುದ್ಧ ಕುಡಿಯುವ ನೀರನ್ನು ತರುತ್ತಿದ್ದರು. ಆದರೆ ಬೈಕ್ ಇಲ್ಲದವರಿಗೆ ಬೋರ್ ವೇಲ್ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿಯಿತ್ತು. ಈ ಅವ್ಯವಸ್ಥೆಯ ಬಗ್ಗೆ “ಶುದ್ದ ಕುಡಿಯುವ ನೀರಿಗಾಗಿ ದಿನ ಪ್ರತಿ ಪರದಾಟ” ಎಂಬ ಶೀರ್ಷಿಕೆಯಲ್ಲಿ ಮಾರ್ಚ್ 29ರಂದು ಸಂಜೆವಾಣಿ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಲಾಗಿತ್ತು. ಈ ಸುದ್ದಿಯನ್ನು ತಾಲೂಕು ಕಾರ್ಯ ನಿರ್ವಹಣಾಧಿಕಾರಿಯಾದ ಪರಮೇಶ್ವರಪ್ಪ ಅವರ ಗಮನಕ್ಕೆ ತರಲಾಗಿತ್ತು. ಅವರು ಸಂಬಂಧಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಅನೇಕ ಬಾರಿ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡುವಂತೆ ಹೇಳಿದ್ದರು. ಚುನಾವಣೆಯ ಇದ್ದುದರಿಂದ ಹಲವು ದಿನಗಳಾದರೂ ದುರಸ್ಥಿ ಆಗಿರಲಿಲ್ಲ. ಸಂಜೆ ವಾಣಿಯು ಪೋನ್ ಕರೆ ಮೂಲಕ ಪರಮೇಶ್ವರಪ್ಪ ಅವರಿಗೆ ತಿಂಗಳಾದರೂ ಶುದ್ಧ ಕುಡಿಯುವ ನೀರಿನ ಮಿಷನ್ ಗಳು ರಿಪೇರಿ ನಡೆದಿಲ್ಲ ಎಂದು ತಿಳಿಸಿದಾಗ ಪರಮೇಶ್ವರಪ್ಪ ಅವರು ಸಿಇಒ ಅವರು ಗಮನಕ್ಕೆ ತಂದ ಕೆಲ ದಿನಗಳಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕದ ಮಿಷನ್ ಗಳನ್ನು ಸರಿ ಪಡಿಸಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.