ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಕೋಲಾರ,ಮಾ,೧೫- ನೂತನವಾಗಿ ನಿರ್ಮಿಸಿರುವ ಜಯ ಪದ್ಮ ಜೀವ ಜಲ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಯಿತು.
ತಾಲ್ಲೂಕಿನ ಶ್ರೀ ಮದ್ ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ತೇಜೇಶ ಲಿಂಗ ಶಿವಾಚಾರ್ಯ ಸ್ವಾಮಿಗಳು, ಮತ್ತು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಶ್ರೀನಿವಾಸ ಗೌಡ, ರವರು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ರವರು ಹಾಗೂ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ವಿಧಾನ ಪರಿಷತ್ ಶಾಸಕ ಎಂ.ಎಲ್.ಅನಿಲ್ ಕುಮಾರ್ ರವರು, ಸೂಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಲಾಪುರ ಗ್ರಾಮದಲ್ಲಿ ಜಯರಾಮ ರೆಡ್ಡಿ ರವರ ಕೊಡುಗೆಯಾಗಿ ನೂತನವಾಗಿ ನಿರ್ಮಿಸಿರುವ ಜಯ ಪದ್ಮ ಜೀವ ಜಲ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪದ್ಮ ಜಯರಾಮ್ ರೆಡ್ಡಿ ರವರು ಮತ್ತು ಕುಟುಂಬಸ್ಥರು, ನಾಗೇಶ್, ಜಿಲ್ಲಾ ಒಕ್ಕೂಟದ ನಿರ್ದೇಶಕರು ಪೆಮ್ಮಶೆಟ್ಟಿಹಳ್ಳಿ ಸುರೇಶ್, ವಕ್ಕಲೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮುರುಳಿ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವೀರೇಂದ್ರ ಪಾಟೀಲ್, ದೊಡ್ಡಹೊಸಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಛತ್ರ ಕೋಡಿಹಳ್ಳಿ ಮಂಜುನಾಥ್, ಧನಮಟ್ನಹಳ್ಳಿ ಲೋಕೇಶ್, ಗ್ರಾಮಾಂತರ ಯುವ ಕಾಂಗ್ರೆಸ್ ಅಧ್ಯಕ್ಷರು ನವೀನ್ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿದ್ದಲಿಂಗ ಒಡೆಯರ್, ರಾಮಾಸಂದ್ರ ಕುಮಾರ್, ಸುಲೂರು ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಅದಿಮೂರ್ಥಿ, ಕೃಷ್ಣಮೂರ್ತಿ, ನಾಗಲಾಪುರ ವಿಜಿಕುಮಾರ್, ರೂಪಾ ವಿಜಿಕುಮರ್, ಪದ್ಮ, ನಾರಾಯಣಸ್ವಾಮಿ, ಚಂದ್ರಪ್ಪ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು, ಪ್ರಕಾಶ, ಹಾಗೂ ಇತರೆ ಮುಖಂಡರು ಮತ್ತು ಗ್ರಾಮಸ್ಥರ ಉಪಸ್ಥಿತರಿದ್ದರು.