ಶುದ್ಧ ಕುಡಿಯುವ ನೀರಿಗಾಗಿ ದಿನ ಪ್ರತಿ ಪರದಾಟ!


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.29: ಸರ್ಕಾರವು ಪ್ರತಿ ಗ್ರಾಮೀಣ ಭಾಗದಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದೆ. ಆದರೆ ಈ ಗ್ರಾಮದಲ್ಲಿ ಕೆಲ ತಿಂಗಳಿಂದ  ಸರಿಯಾದ ಸಮಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ.
  ತಾಲೂಕಿನ ಹ್ಯಾಳ್ಯಾ ಗ್ರಾಮದಲ್ಲಿ ಸರಿಯಾದ ಸುಮಾರು 3000 ಜನಸಂಖ್ಯೆ ಹೊಂದಿದ್ದು ಈ  ಗ್ರಾಮದಲ್ಲಿ ಸುಮಾರು ಮೂರು ವರ್ಷದ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಾಣ ಮಾಡಿದ್ದು, ಒಂದು ತಿಂಗಳಿಂದ ಸರಿಯಾದ ಸಮಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ, ಮತ್ತು ಸರಿಯಾಗಿ ನೀರು ಫಿಲ್ಟರ್ ಆಗುತ್ತಿಲ್ಲ ಎಂದು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಮತ್ತು ಏಜೆನ್ಸಿ ಗಳ ವಿರುದ್ಧ  ಅಕ್ರೋಶವನ್ನು ವ್ಯಕ್ತಪಡಿಸಿದರು.
  ಗ್ರಾಮ ಪಂಚಾಯಿತಿ ವತಿಯಿಂದ ಸಾಕಷ್ಟು ನೀರಿನ  ಪೂರೈಕೆ ಇದ್ದು, ಶುದ್ಧ ಕುಡಿಯುವ ನೀರಿನ ಘಟಕದ ಸಾಮಗ್ರಿಗಳು ತುಕ್ಕು ಹಿಡಿದು ಫಿಲ್ಟರ್ ಸರಿಯಾಗಿ ಆಗುತ್ತಿಲ್ಲ.  ಒಂದು ತಿಂಗಳಿಂದ ಸರಿಯಾದ ಸಮಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ, ಒಂದು ಗಂಟೆಗೆ ಕೇವಲ 25 ಲೀಟರ್ ನೀರು ಮಾತ್ರ ಪೂರೈಕೆ ಆಗುತ್ತಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕೈಕಟ್ಟಿ ಕುಳಿತುಕೊಂಡು ಸಾರ್ವಜನಿಕರ ಆರೋಗ್ಯದಲ್ಲಿ ಆಟವಾಡುತ್ತಿದ್ದಾರೆ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ತಿಂಗಳಿಂದ ಸರಿಯಾದ ಸಮಯಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ನೀರು ಸರಿಯಾಗಿ ಫಿಲ್ಟರ್ ಆಗದೆ ಇರುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ
ಪ್ರಸನ್ನ  ಸಂಪನ್ನ
ಗಂಟೆಗೆ 25 ಲೀಟರ್ ಮಾತ್ರ ನೀರು ಪೂರೈಕೆ ಆಗುತ್ತಿದೆ, ಬೈಕ್ ಇದ್ದವರು ಸಮೀಪದ ಕೊಟ್ಟೂರಿಗೆ ಹೋಗಿ ಶುದ್ದ ಕುಡಿಯುವ ನೀರನ್ನು ತರುತ್ತಾರೆ. ಆದರೆ ಬೈಕ್ ಇಲ್ಲದವರು ದಿನ ಪ್ರತಿ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸಮಕ್ಕೆ  ಸರಿಯಾಗಿ ಹಣ ಎಣಿಕೆ ಮಾಡಲು ಮಾತ್ರ ಬರುತ್ತಾರೆ. ಇಲ್ಲಿನ ಸಮಸ್ಯೆ ಬಗ್ಗೆ ಗಮನ ಹರಿಸುತ್ತಿಲ್ಲ.
ಕೊಟ್ರೇಶ್ ಕೋರಿ