ಶುದ್ದ ಕುಡಿಯುವ ನೀರಿನ ಘಟಕಕ್ಕೆ ಶಾಸಕರಿಂದ ಚಾಲನೆ

ವಿಜಯಪುರ.ನ೧೦:ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ಕುಡಿಯುವ ನೀರು ಮುಖ್ಯವಾಗಿದ್ದು ನೀರನ್ನು ವ್ಯಯ ಮಾಡದೇ ಮಿತವಾಗಿ ಬಳಸಿ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು
ಪಟ್ಟಣ ಸಮೀಪದ ವೆಂಕಟಗಿರಿಕೋಟೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಬಳಿ ಬಮೂಲ್ ಹಾಲು ಒಕ್ಕೂಟದವತಿಯಿಂದ ಗ್ರಾಮಸ್ಥರ ಅನುಕೂಲಕ್ಕಾಗಿ ಸುಮಾರು ೪ ಲಕ್ಷರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಪ್ಲೊರೇಡ್ ಮಿಶ್ರಣದ ನೀರು ಗ್ರಾಮೀಣ ಭಾಗದ ಅತಿ ಹೆಚ್ಚು ಮಂದಿ ಸೇವಿಸುತಿದ್ದು ಇದರಿಂದ ಅನಾ ರೋಗ್ಯ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕಿ ೧೦೦೦ ಅಡಿಗೂ ಹೆಚ್ಚು ಆಳದ ಕೊಳವೆ ಬಾವಿಗಳಲ್ಲಿ ದೊರೆಯುವ ನೀರು ಕುಡಿಯಲು ಯೋಗ್ಯವಲ್ಲವೆಂಬ ಅರಿವು ಹಾಗೂ ಊರಿನ ಪ್ರತಿಯೊಬ್ಬರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ವೆಂಕಟಗಿರಿಕೋಟೆ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದು ಅಭಿಪ್ರಾಯಿಸಿದರು.
ದೇವನಹಳ್ಳಿ ತಾಲೂಕಿನ ಪ್ರತಿಯೊಂದು ಗ್ರಾಮಕ್ಕೂ ಮೂಲ ಸೌಲಭ್ಯವನ್ನು ಒದಗಿಸುವುದರ ಮೂಲಕ ಕ್ಷೇತ್ರದ ಅಭಿವೃದ್ದಿ ಮಾಡಲಾಗುತ್ತಿದೆ, ಪ್ರತಿಯೊಂದು ಗ್ರಾಮದಲ್ಲಿಯೂ ರಸ್ತೆಗಳು ಚರಂಡಿಗಳು, ಸಮುದಾಯ ಭವನಗಳು, ಕೆಲ ಸಂಘ ಸಂಸ್ಥೆಗಳ ನೆರವಿನೊಂದಿಗೆ ಶುದ್ದ ಕುಡಿಯುವ ನೀರಿನ ಘಟಕಗಳು, ಅಂಗನವಾಡಿ ಕಟ್ಟಡಗಳು, ಆಸ್ಪತ್ರೆಗಳು ಹೀಗೆ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೆನೆ ಎಂದರು.ಬಮೂಲ್ ನಿರ್ದೇಶಕ ಹಾಗೂ ಜೆಡಿಎಸ್ ತಾಲೂಕು ಅಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್ ಮಾತನಾಡಿ, ರೈತರು ಜಾನುವಾರುಗಳಿಗೆ ಹಾಲಿನ ಇಳುವರಿಗೆ ತಕ್ಕ ಹಾಗೆ ಉತ್ತಮ ಗುಣಮಟ್ಟದ ಆಹಾರ ನೀಡಿ ಹೆಚ್ಚು ಆದಾಯ ಪಡೆಯಬೇಕು ಎಂದರು.
ವೆಂಕಗಿರಿಕೋಟೆ ಹಾಲಿನ ಡೈರಿ ಅದ್ಯಕ್ಷ ಆರ್.ಮುನಿರಾಜ್ ಮಾತನಾಡಿ ಗ್ರಾಮದಲ್ಲಿ ಶುದ್ದ ಕುಡಿಯುವ ನೀರಿನ ಘಟಕಕ್ಕೆ ಗ್ರಾಮಸ್ಥರಿಂದ ಬೇಡಿಕೆ ಬಹುದಿನಗಳಿಂದಿತ್ತು. .ಬಮೂಲು ನಿರ್ದೇಶಕರ ಸಹಕಾರ ಹಾಗೂ ಹಾಲು ಉತ್ಪಾದಕರ ನಿರಂತರ ಪರಿಶ್ರಮದಿಂದ ಈ ಒಂದು ಯೋಜನೆ ಜಾರಿಗೆ ಬರಲು ಸಾದ್ಯವಾಯಿತು.ಜೆ.ಡಿ.ಎಸ್ ತಾಲೂಕು ಉಪಾಧ್ಯಕ್ಷ ಕಾರಹಳ್ಳಿ ಮುನೇಗೌಡ, ಡೇರಿ ನಿರ್ದೇಶಕರಾದ ಚನ್ನಮ್ಮ, ಲಕ್ಷ್ಮಣ್‌ರೆಡ್ಡಿ,ಎನ್.ರಾಜ್‌ಗೋಪಾಲ್,ಕೇಶವರಾಜ್,ಲಕ್ಷ್ಮೀನಾರಾಯಣ್,ಜಗನ್ನಾಥ್,ಗೋಪಾಲ ರೆಡ್ಡಿ,ಮಂಜುಳಾ, ಬಮೂಲ್ ಅಧಿಕಾರಿಗಳಾದ ಗಂಗಯ್ಯ, ಜಗದೀಶ್, ಪ್ರಸನ್ನಕುಮಾರ್, ಎ.ಸಿ.ನಾಗರಾಜು, ಕಾರ್ಯದರ್ಶಿ ಆನಂದ್, ಎಂ.ಸೀತರಾಮಯ್ಯ, ವಿ.ಎಂ.ಲೋಕೆಶ್, ಅಮರ್‌ನಾಥ್, ಎನ್.ರವಿ, ರಮಾನಂದರಡ್ಡಿ ಇತರರು ಇದ್ದರು.