ಶುದ್ದನೀರಿನ ಘಟಕ ಲೋಕಾರ್ಪಣೆ

ಕೋಲಾರ,ಸೆ,೬:ತಾಲ್ಲೂಕಿನ ನಾಗಲಾಪುರ ಗ್ರಾಮಕ್ಕೆ ಸಮಾಜ ಸೇವಕ ನಾಗೇಶ್ ಸ್ವಂತ ಖರ್ಚಿನಲ್ಲಿ ಶುದ್ಧ ನೀರಿನ ಘಟಕ ಒದಗಿಸಿಕೊಡುವ ಮೂಲಕ ಗ್ರಾಮದ ಜನತೆಗೆ ಶುದ್ದ ಕುಡಿಯುವ ನೀರಿನ ಭಾಗ್ಯ ದೊರಕಿಸಿಕೊಟ್ಟಿದ್ದಾರೆ ಎಂದು ನಾಗಲಾಪುರ ಮಠಾಧೀಶರಾದ ಶ್ರೀ ತೇಜೇಶ ಶಿವಲಿಂಗ ಸ್ವಾಮೀಜಿಗಳು ಅಭಿನಂದಿಸಿದರು.
ಗ್ರಾಮದಲ್ಲಿ ಭಾನುವಾರ ಶುದ್ದ ನೀರಿನ ಘಟಕಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಶ್ರೀಗಳು, ಗ್ರಾಮೀಣ ಜನತೆಗೆ ಉತ್ತಮ ಆರೋಗ್ಯ ಸಿಗಲು ಶುದ್ದ ಕುಡಿಯುವ ನೀರಿನ ಅಗತ್ಯವಿದೆ, ನೀರಿನಿಂದಲೇ ಅನೇಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರತಿಯೊಬ್ಬರೂ ಇಂತಹ ಶುದ್ದ ನೀರನ್ನೇ ಸೇವಿಸಿ ಆರೋಗ್ಯ ಹೊಂದಿ ಎಂದುಕಿವಿಮಾತು ಹೇಳಿದರು.
ಉಳ್ಳವರು ಅನೇಕರಿದ್ದರೂ, ಸಹಾಯ ಹಸ್ತ ಚಾಚುವರು ಕೆಲವೇ ಮಂದಿ ಎಂದ ಅವರು, ಗ್ರಾಮೀಣ ಜನತೆಗೂ ಉತ್ತಮ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ, ಜತೆಗೆ ಉಳ್ಳವರು ಕೈ ಚಾಚಿದರೆ ಮತ್ತಷ್ಟು ಸೌಲಭ್ಯಗಳನ್ನುಒದಗಿಸಬಹುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾನೌಕರರ ಸಂಘದ ಖಜಾಂಚಿ ಕೆ.ವಿಜಯ್, ಗ್ರಾಮದ ಮುಖಂಡರಾದ ಸುರೇಶ್, ಸಿದ್ದಲಿಂಗಯ್ಯ, ಮುನೇಂದ್ರ, ಶ್ರೀನಿವಾಸ, ಪ್ರಕಾಶ್, ವಿನಯ್,ಆರ್ ಮುನಿಯಪ್ಪ, ಅಟ್ಟೂರು ಮಂಜುನಾಥ್, ಮುನಿನಾರಾಯಣ, ಅರುಣ್ ಹಾಗೂ ಮುಂತಾದ ಗ್ರಾಮಸ್ಥರು ಉಪಸ್ಥಿತರಿದ್ದರು.