ಶುದ್ದಕುಡಿಯುವ ನೀರು ಸ್ವಚ್ಚತೆಗೆ ಕರೆ

ಮುನವಳ್ಳಿ,ಮೇ28 : ಯಕ್ಕುಂಡಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾದ ಫೀರ ದಿಲಾವರಗೋರಿ ಶಹಾವಲಿ ಯವರ ಉರುಸು ಮಂಗಳವಾರ ಮೇ 28 ರಿಂದ ಪ್ರಾರಂಭ ಗೊಳ್ಳುವ ನಿಮಿತ್ಯವಾಗಿ ತಾಲೂಕಾ ಪಂಚಾಯತ ಸವದತ್ತಿ ಮತ್ತು ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯತ ಯಕ್ಕುಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತಾದ ಪೂರ್ವಭಾವಿ ಸಭೆ ಗ್ರಾ ಪಂ ಸಭಾ ಭವನದಲ್ಲಿ ಜರುಗಿತು.

ಸವದತ್ತಿಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಯಶವಂತಕುಮಾರ ಮುಖ್ಯ ಅಥಿತಿಗಳಾಗಿ ಮಾತನಾಡಿ ಯಕ್ಕುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳು ಹಿಂದೂ ಮುಸ್ಲಿಂ ಭಾವೈಕ್ಯತೆಗೆ ಪ್ರತೀಕವಾಗಿದ್ದು ಮತ್ತು ಫೀರ ದಿಲಾವರಗೋರಿ ಶಹವಲಿಯವರ ಉರುಸು ಜರಗುತ್ತಿದ್ದು. ಈ ಸಂಧರ್ಬದಲ್ಲಿ ಕಲುಷಿತ ನೀರಿನಿಂದ ಹರಡಬಹುದಾದ ರೋಗಗಳ ಬಗ್ಗೆ ಮಾಹಿತಿ ನೀಡಿ ಮುಂಜಾಗ್ರತೆಯಾಗಿ ಗ್ರಾಮಸ್ಥರು ಕುಡಿಯುವ ನೀರಿನ ಶುದ್ದತೆ ಕಾಯ್ದುಕೊಳ್ಳುವುದು ಮತ್ತು ಆರ್ ಓ ಘಟಕಗಳಿಂದ ಶುದ್ದಿಕರಿಸಿದ ನೀರನ್ನು ಬಳಸಲು ತಿಳಿಸಿದರು. 

ನೀರನ್ನು ಕಾಸಿ ಆರಿಸಿ ಕುಡಿಯಲು ಹೇಳಿದರು. ಉರುಸು ಸಮಯದಲ್ಲಿ ಗ್ರಾಮದ ಸ್ವಚ್ಚತೆಯ ಬಗ್ಗೆ ಆದ್ಯತೆ ನೀಡುವುದು ಅವಶ್ಯಕವಾಗಿದೆ ಎಂದರು. ತಮ್ಮ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಶ್ರೀಪಾದ ಸಬನೀಸ ಮಾತನಾಡಿ ಕಲುಷಿತ ನೀರಿನಿಂದ ಹರಡಬಹುದಾದ ಅತಿಸಾರ, ವಾಂತಿಬೇದಿ, ಕಾಲರಾ, ಡೇಂಗ್ಯು, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಉರುಸ ಕಾರ್ಯಕ್ರಮ ಮುಗುಯುವವರೆಗೆ ಅಂಬುಲೆನ್ಸ ಸೇವೆ ಯಕ್ಕುಂಡಿಯ ಪ್ರಾಥಮಿಕ ಆರೋಗ್ಯಕೇಂದ್ರದಲ್ಲಿ ಒದಗಿಸುವ ಭರವಸೆ ನೀಡಿದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಂ ಎಂ ಅಂಗಡಿ ಮಾತನಾಡಿ ಕಲುಷಿತ ನೀರು ಮತ್ತು ನೈರ್ಮಲ್ಯ ದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿ, ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಯಕ್ಕುಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ನರಸಾರಡ್ಡಿ ಮಾತನಾಡಿ ಅತಿಸಾರ, ವಾಂತಿಬೇದಿ ಪ್ರಕಣಗಳು ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸವರಾಜ ಹೊಂಗಲ ಮತ್ತು ಬಸನಗೌಡ ಪಾಟೀಲ ಮಾತನಾಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅಧಿಕಾರಿಗಳ ಗಮನಸೆಳೆದರು. ಸಮಾರಂಭದ ಅದ್ಯಕ್ಷತೆಯನ್ನು ಗ್ರಾ ಪಂ ಅಧ್ಯಕ್ಷೆ ಪೈರೋಜಾ ಬಾರಿಗಿಡದ ವಹಿಸಿದ್ದರು. ಗ್ರಾ ಪಂ ಉಪಾಧ್ಯಕ್ಷೆ ಮಾಸಾಬಿ ಇಮ್ಮನ್ನವರ, ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಅಬುಲ್ದ್‍ಖಾದರಜೈಲಾನಿ ಬಾರಿಗಿಡದ, ತಾಲೂಕಾ ಸಮಾಜ ಕಲ್ಯಾಣ ಅಧಿಕಾರಿಗಳಾದ ಆರ್ ಆರ್ ಕುಲಕರ್ಣಿ, ಸವದತ್ತಿ ಎಇಇ ಬಿ ವ್ಹಿ ಅಯ್ಯನಗೌಡರ, ಕಂದಾಯ ನೀರಿಕ್ಷಕ ಎಸ್ ಎಮ್ ಮುದಗಲ್, ಪಿಡಿಒ ವಾಯ್ ಪಿ ಬೋಳಶೆಟ್ಟಿ, ಗ್ರಾ.ಪಂ ಆಡಳಿತಾಧಿಕಾರಿ ಮುದಕಪ್ಪ ಕದಂ, ವಿವಿಧ ಇಲಾಖೆಗಳ ಅದಿಕಾರಿಗಳು, ಯಕ್ಕುಂಡಿ, ಧೂಪದಾಳ, ಕಾರ್ಲಕಟ್ಟಿ, ಕಾರ್ಲಕಟ್ಟಿ ತಾಂಡೆ ಗ್ರಾಮಗಳ ಹಿರಿಯರು, ಸರ್ವ ಗ್ರಾ ಪಂ ಸದಸ್ಯರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಪ್ರಕಾಶ ಕಮ್ಮಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.